ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಸ್ಪರ್ಧಿಯಾಗಿರುವ ವರ್ತೂರು ಸಂತೋಷ್ ಬಂಧನವಾಗಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಸ್ಪರ್ಧಿ ಒಬ್ಬ ಅರೆಸ್ಟ್ ಆಗಿದ್ದು, ಹುಲಿ ಉಗುರು ಇರುವ ಪೆಂಡೆಂಟ್ ಧರಿಸಿದ್ದರು ಎಂಬ ಆರೋಪದ ಮೇಲೆ ಬಂಧನವಾಗಿದೆ.
ಭಾನುವಾರ (ಅಕ್ಟೋಬರ್ 22) ಸಂಜೆ ಅವರನ್ನು ಅರಣ್ಯಾಧಿಕಾರಿಗಳು ಬಿಗ್ ಬಾಸ್ ಮನೆಯಲ್ಲೇ ಬಂಧಿಸಿದ್ದಾರೆ. ಅವರು ಕತ್ತಿಗೆ ಹಾಕಿದ್ದ ಚೈನ್ನಲ್ಲಿ ಹುಲಿಯ ಉಗುರಿನ ಪೆಂಡೆಂಟ್ ಇತ್ತು. ಇದು ಚರ್ಚೆ ಹುಟ್ಟುಹಾಕಿತ್ತು. ಈಗ ಅವರನ್ನು ಬಂಧಿಸಿ, ಪರಿಶೀಲಿಸಿದಾಗ ಇದು ಹುಲಿ ಉಗುರು ಎಂಬುದು ಖಚಿತವಾಗಿದೆ. ಶೀಘ್ರವೇ ಅವರನ್ನು ಕೋರ್ಟ್ಗೆ ಹಾಜರುಪಡಿಸಲಾಗುತ್ತಿದೆ.
ಬೆಂಗಳೂರಿನ ರಾಮೋಹಳ್ಳಿ ಅರಣ್ಯಾಧಿಕಾರಿಗಳಿಂದ ಈ ಕಾರ್ಯಾಚರಣೆ ನಡೆದಿದೆ. ಸುಮೊಟೋ ಕೇಸ್ ದಾಖಲಿಸಿ ಕಾರ್ಯಾಚರಣೆ ಮಾಡಲಾಗಿತ್ತು. ಇನ್ನಷ್ಟು ಮಾಹಿತಿ ಪಡೆಯಲು ಸಂತೋಷ್ ಅವರನ್ನು ಕೋರ್ಟ್ಗೆ ಹಾಜರುಪಡಿಸಲಾಗುತ್ತಿದೆ. ವೈಲ್ಡ್ ಲೈಫ್ ಪ್ರೊಟೆಕ್ಷನ್ ಆ್ಯಕ್ಟ್ ಅಡಿಯಲ್ಲಿ ಈ ಬಂಧನ ನಡೆದಿದೆ.




