ಕಾರ್ಕಳ:ಮೊಬೈಲ್ ಫೋನ್ ಕೊಡಿ ನಿಮ್ಮ ಮಗನ ಹತ್ತಿರ ಮಾತನಾಡಲಿಕ್ಕಿದೆ ಎಂದು ಹೇಳಿ ವೃದ್ಧೆಯೊಬ್ಬರ ಫೊನ್ ತೆಗೆದುಕೊಂಡು ಮಾತನಾಡಿದಂತೆ ಮಾಡಿ ಮಗ ಫೋನ್ ತೆಗೆಯುತ್ತಿಲ್ಲಎಂದು ಹೇಳಿ ಮೊಬೈಲ್ ಫೋನ್ ಪಡೆದುಕೊಂಡ ಮಧ್ಯವಯಸ್ಕ ಅಪರಿಚಿತ ವ್ಯಕ್ತಿಯೊಬ್ಬ ವೃದ್ಧೆಯ ಮೊಬೈಲ್,700 ರೂ ನಗದು ಹಾಗೂ 30 ಸಾವಿರ ಮೌಲ್ಯದ ಹವದ ಚೈನ್ ಕಳವುಗೈದು ಪರಾರಿಯಾದ ಘಟನೆ ಶನಿವಾರ ನಡೆದಿದೆ.
ಸುಶೀಲಾ ಎಂಬ 77 ವರ್ಷ ಪ್ರಾಯದ ವೃದ್ಧೆ ಶನಿವಾರ ಬೆಳಗ್ಗೆ ಕಾರ್ಕಳ ಬಸ್ ಸ್ಟಾಂಡ್ ಹತ್ತಿರ ಇರುವ ಅಡ್ಯಂತಾಯ ಕ್ಲಿನಿಕ್ಗೆ ಹೋಗಿ ನಡೆದುಕೊಂಡು ಹೋಗುತ್ತಿರುವಾಗ ಅಪರಿಚಿತ ವ್ಯಕ್ತಿ ವೃದ್ಧೆಯ ಬಳಿ ಬಂದು ನಿಮ್ಮ ಮಗನ ಜತೆ ಮಾತನಾಡುವುದಾಗಿ ಅವರ ಮೊಬೈಲ್ ಪಡೆದುಕೊಂಡು ಬಳಿಕ ಮೊಬೈಲ್ ನಲ್ಲಿ ಮಾತನಾಡಿದಂತೆ ನಟಿಸಿ ಸುಶೀಲಾ ಅವರನ್ನು ಮಾರ್ಕೆಟ್ ಹತ್ತಿರದ ಅಂಗಡಿಯ ಮೆಟ್ಟಿಲಲ್ಲಿ ಕುಳ್ಳಿರಿಸಿ 500 ರೂಪಾಯಿ ಕೊಡಿ ಈಗ ಕೊಡುತ್ತೇನೆಂದು ಹೇಳಿ ಸುಶೀಲಾ ಅವರ ಪರ್ಸಿನಿಂದ 700 ರೂಪಾಯಿ ತೆಗೆದುಕೊಂಡು ಈಗ ಬರುತ್ತೇನೆಂದು ಹೇಳಿ ಹೋಗಿ ಸ್ವಲ್ಪಹೊತ್ತಿನಲ್ಲಿ ವಾಪಾಸು ಬಂದು ಪಿರ್ಯಾದಿದಾರರಲ್ಲಿ ನಿಮ್ಮ ಚೈನ್ ಕೊಡಿ ನನ್ನ ತಾಯಿಗೆ ಅದೇ ರೀತಿಯ ಚೈನ್ ಮಾಡಿಸಲಿಕ್ಕಿದೆ ಎಂದು ಹೇಳಿ ಒಂದೂವರೆ ಪವನ್ ತೂಕದ ಹವಳದ ಚಿನ್ನದ ಸರವನ್ನು ತೆಗೆದುಕೊಂಡು ಈಗ ಬರುತ್ತೇನೆಂದು ಹೇಳಿ ನಂಬಿಸಿ ಮೊಬೈಲ್ ಫೋನ್, ನಗದು ರೂಪಾಯಿ 700 ಮತ್ತು 30 ಸಾವಿರ ಮೌಲ್ಯದ ಹವಳ ಅಳವಡಿಸಿದ ಸುಮಾರು ಒಂದೂವರೆ ಪವನ್ ತೂಕದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾನೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















