ಹೆಬ್ರಿ :ವಿದ್ಯಾಭ್ಯಾಸದಲ್ಲಿ ಹಿಂದುಳಿದಿದ್ದ ವಿದ್ಯಾರ್ಥಿನಿಯೊಬ್ಬಳು ಮಾನಸಿಕ ಖಿನ್ನತೆಗೆ ಒಳಗಾಗಿ ತಾನು ಕಲಿಯುತ್ತಿದ್ದ ಕಾಲೇಜಿನ ಸಮೀಪದ ನಿರ್ಮಾಣ ಹಂತದ ಕಟ್ಟಡದಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹೆಬ್ರಿ ತಾಲೂಕಿನ ಕಿನ್ನಿಗುಡ್ಡೆ ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಲತಾ ಎಂಬವರ ಮಗಳು ಪೂಜಿತ ಪ್ರಾಯ (17) ಎಂಬವಳು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಹೆಬ್ರಿಯ ಎಸ್.ಆರ್. ಕಾಲೇಜ್ ನಲ್ಲಿ ದ್ವಿತೀಯ ಪಿಯುಸಿ ವಿಧ್ಯಾಭ್ಯಾಸ ಮಾಡಿಕೊಂಡಿದ್ದ ಪೂಜಿತಾ ಸರಿಯಾಗಿ ಕಾಲೇಜಿಗೆ ಹೋಗುತ್ತಿರಲಿಲ್ಲ ಇದರಿಂದ ಆಕೆ ವಿದ್ಯಾಭ್ಯಾಸದಲ್ಲಿಯೂ ಹಿಂದುಳಿದಿದ್ದು,ಇದಲ್ಲದೇ ಪೂಜಿತಾ ಯಾವುದೋ ವಿಚಾರದಲ್ಲಿ ಮನನೊಂದು ಯಾರಲ್ಲಿಯೂ ಹೇಳಿಕೊಳ್ಳಲಾಗದೇ ವಿಪರೀತ ಯೋಚನೆ ಮಾಡಿ ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಈ ಕೃತ್ಯ ಎಸಗಿದ್ದಾಳೆ ಎಂದು ಶಂಕಿಸಲಾಗಿದೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


















