Share this news

ಕಾರ್ಕಳ:ವಿಪರೀತ ರಕ್ತದೊತ್ತಡ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಏಕಾಎಕಿ ಕುಸಿದುಬಿದ್ದು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಅಜೆಕಾರು ಕೈಕಂಬ ಎಂಬಲ್ಲಿ ಸಂಭವಿಸಿದೆ.
ಮರ್ಣೆ ಗ್ರಾಮದ ಕೈಕಂಬ ನಿವಾಸಿ ಪ್ರಗತಿಪರ ಕೃಷಿಕ ಉಮಾನಾಥ ಬಾಂದೊಡ್ಕರ್ (54) ಎಂಬವರು ರಕ್ತದೊತ್ತ ಏರುಪೇರಾಗಿ ಆಸ್ಪತ್ರೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ. ಉಮಾನಾಥ ಬಾಂದೋಡ್ಕರ್ ಕಳೆದ 3-4 ವರ್ಷಗಳಿಂದ ರಕ್ತದೊತ್ತಡ ಕಾಯಿಲೆಯಿಂದ ಬಲಳುತ್ತಿದ್ದು, ಈ ಬಗ್ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಸೋಮವಾರ ಮುಂಜಾನೆ 4.30ರ ವೇಳೆಗೆ ಹಠಾತ್ ಒಮ್ಮೆಲೇ ಬಿ.ಪಿ ಉಲ್ಬಣಗೊಂಡಿದ್ದು, ಅಸ್ವಸ್ಥಗೊಂಡ ಅವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಟಿ.ಎಂ.ಎ ಪೈ ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕುಳಿಯಲಿಲ್ಲ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Leave a Reply

Your email address will not be published. Required fields are marked *