ಕಾಪು, ಡಿ.18:ಕಳೆದ ಕೆಲವು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ ದಂಪತಿಯ ಅಪ್ರಾಪ್ತ ವಯಸ್ಸಿನ ಪುತ್ರಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಕಾಪು ಪೊಲೀಸರು ಕಾಸರಗೋಡಿನ ಕುಂಬಳೆ ಎಂಬಲ್ಲಿ ಬಂಧಿಸಿದ್ದಾರೆ. ಬಂಧಿತರನ್ನು ಆಕೆಯ ಸ್ನೇಹಿತ ಶಿರ್ವ ನಿವಾಸಿ ಗೀರಿಶ್ (20), ಮತ್ತು ಅಪಹರಿಸಲು ಸಹಕರಿಸಿದ ಆರೋಪಿಗಳಾದ ಶಿರ್ವ ನಿವಾಸಿ ರೂಪೇಶ್ (22), ಜಯಂತ್ (23) ಹಾಗೂ ಮಜೂರು ನಿವಾಸಿ ಮುಹಮ್ಮದ್ ಅಝೀಝ್(21) ಎಂದು ತಿಳಿದುಬಂದಿದೆ. ಲೀಲಾಧರ ಶೆಟ್ಟಿಯವರು 16 ವರ್ಷಗಳ ಹಿಂದೆ ಹೆಣ್ಣುಮಗುವನ್ನು ದತ್ತು ಪಡೆದಿದ್ದರು.ಆಕೆ ಕಳೆದ ಡಿ 11 ರಂದು ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆಕೆಯ ಸ್ನೇಹಿತ ಗಿರೀಶ್ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಅಪಹರಣ ಹಾಗೂ ಪೋಕ್ಸೋ ಕೇಸ್ ದಾಖಲಾಗಿತ್ತು.
ಮಗಳು ನಾಪತ್ತೆಯಾಗಿರುವ ಚಿಂತೆಯಲ್ಲಿ ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂಧರಾ ಮರ್ಯಾದೆಗೆ ಅಂಜಿ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು












