ಮುಂಬಯಿ: ಶ್ರೀ ನಿತ್ಯಾನಂದ ಸೇವಾ ಸಂಘ ರಿ. ಮೀರಾ- ಭಾಯಂಧರ್ ಇದರ ವಾರ್ಷಿಕ ದಿನಾಚರಣೆಯ ಅಂಗವಾಗಿ ಫೆಬ್ರವರಿ 3 ರಂದು ಶ್ರೀ ಕ್ಷೇತ್ರ ಗಣೇಶ್ ಪುರಿಗೆ “ನಮ್ಮಯ ನಡಿಗೆ ಸ್ವಾಮಿಯ ನೆಡೆಗೆ” 15ನೇ ವರ್ಷದ ಪಾದಯಾತ್ರೆ ನಡೆಯಲಿದೆ.
ಫೆ. 3 ಶನಿವಾರ ಸಂಜೆ 6 ಗಂಟೆಗೆ ಶ್ರೀ ಗಣೇಶ್ ಜೈ ಅಂಬೆ ಮಾತಾ ಮಂದಿರ್, ಸಿಲ್ವರ್ ಪಾರ್ಕ್ ಮೀರಾ ರೋಡ್ ಇಲ್ಲಿ ಧಾರ್ಮಿಕ ವಿಧಿ ವಿಧಾನ ಭಜನೆ ಹಾಗೂ ಮಂಗಳಾರತಿಯೊಂದಿಗೆ, ಬೇವಿನ ಕೊಪ್ಪ ಶ್ರೀ ವಿಜಯಾನಂದ ಸ್ವಾಮೀಜಿ ಮತ್ತು ಶ್ರೀ ಸಾಂತಿಂಜ ಜನಾರ್ದನ ಭಟ್ ಇವರ ಆಶೀರ್ವಚನದೊಂದಿಗೆ ನಮ್ಮಯ ನಡಿಗೆ ಸ್ವಾಮಿಯ ನೆಡೆಗೆ ಪಾದಯಾತ್ರೆಗೆ ಚಾಲನೆ ದೊರೆಯಲಿದೆ ಎಂದು ಸಂಘಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ