Share this news

ಗುವಾಹಟಿ: ಏಕರೂಪ ನಾಗರಿಕ ಸಂಹಿತೆ ಜಾರಿಯ ಮೊದಲ ಭಾಗವಾಗಿ ಅಸ್ಸಾಂ ಸರ್ಕಾರ ಮುಸ್ಲಿಂ ಮದುವೆ ಹಾಗೂ ವಿಚ್ಚೇದನ ವಿಚಾರದಲ್ಲಿ ವೈಯಕ್ತಿಕ ಷರಿಯಾ ಕಾಯ್ದೆಗಳನ್ನು ರದ್ದುಪಡಿಸಿದೆ. ಆದರೆ ಅಸ್ಸಾಂ ಸರ್ಕಾರದ ಈ ನಿರ್ಧಾರ ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದು, ಅಸ್ಸಾಂ ಸರ್ಕಾರದ ನಿರ್ಧಾರದ ವಿರುದ್ಧ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಮುಸ್ಲಿಮರು ಕೇವಲ ಷರಿಯತ್ ಕಾನೂನು ಮಾತ್ರ ಪಾಲಿಸುತ್ತಾರೆ ಹಾಗೂ ಖುರಾನ್ ಮಾತ್ರ ಪಾಲಿಸುತ್ತಾರೆ ಎಂದು ಸಮಾಜವಾದಿ ಪಕ್ಷದ ನಾಯಕ ಎಸ್‌.ಟಿ ಹಸನ್ ಗುಡುಗಿದ್ದಾರೆ.

ಪ್ರತಿ ಧರ್ಮವು ಅದರದ್ದೇ ಆದ ಕಾನೂನು ಪಾಲಿಸುತ್ತದೆ. ಮುಸ್ಲಿಮರು ಸಾವಿರಕ್ಕಿಂತಲೂ ಹೆಚ್ಚು ವರ್ಷಗಳಿಂದ ಷರಿಯಾ ಕಾನೂನು, ಖುರಾನ್ ಪಾಲಿಸಿಕೊಂಡು ಬರುತ್ತಿದ್ದಾರೆ. ಇದೀಗ ಕಾಯ್ದೆ ಬದಲಾದರೆ ನಂಬಿಕೆ, ಪದ್ಧತಿಗಳು ಬದಲಾಗುವುದಿಲ್ಲ. ಇದು ಮುಸ್ಲಿಮರಿಗೆ ಅನ್ವಯವಾಗುವುದಿಲ್ಲ ಎಂದು ಹಸನ್ ಹೇಳಿದ್ದಾರೆ. ಇದೇ ವಿಚಾರವಾಗಿ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಪಕ್ಷದ ಮುಖ್ಯಸ್ಥ, ಮೌಲನಾ ಬದ್ರುದ್ದಿನ್ ಅಜ್ಮಲ್ ಕೂಡ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಸಚಿವ ಸಂಪುಟವು ಶುಕ್ರವಾರ ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ-1935 ಅನ್ನು ರದ್ದುಗೊಳಿಸಿದೆ. ಈ ಕುರಿತು ಸಚಿವ ಜಯಂತ ಮಲ್ಲಬರುವಾ ಹೇಳಿಕೆ ನೀಡಿದ್ದು ಇದು ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೊಳಿಸುವ ಕ್ರಮವಾಗಿದೆ. ಭಾರತೀಯ ಎಲ್ಲಾ ಜಾತಿ,ಧರ್ಮದ ನಾಗರಿಕರಿಗೂ ಒಂದೇ ಕಾನೂನು,ಮಾತ್ರವಲ್ಲದೇ ಷರಿಯಾ ಕಾನೂನಿನಿಂದ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಮುಸ್ಲಿಂ ಮಹಿಳೆಯರ‌ ಹಕ್ಕುಗಳನ್ನು ರಕ್ಷಿಸಲಾಗುವುದು ಎಂದಿದ್ದಾರೆ. ಇದಲ್ಲದೇ ವಿಷಯಗಳನ್ನು ವಿಶೇಷ ವಿವಾಹ ಕಾಯ್ದೆಯಡಿ ನೋಡಿಕೊಳ್ಳಲಾಗುವುದು ಎಂದಿದ್ದಾರೆ. ಮುಸ್ಲಿಂ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿರುವ 94 ಮುಸ್ಲಿಂ ರಿಜಿಸ್ಟ್ರಾರ್‌ಗಳನ್ನು ತಮ್ಮ ಕರ್ತವ್ಯದಿಂದ ಬಿಡುಗಡೆ ಮಾಡಲಾಗುವುದು. ಅವರಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಅವರು ಘೋಷಿಸಿದ್ದಾರೆ.

 

             

Leave a Reply

Your email address will not be published. Required fields are marked *