ಕಾರ್ಕಳ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇಂತಹ ಶಿಬಿರಗಳು ಪ್ರೇರಕ. ಇಂತಹ ಶಿಬಿರಗಳು ತಾಲೂಕಿನ ಎಲ್ಲಾ ಶಾಲೆಗಳಲ್ಲಿ ನಡೆಸುವಂತಾಗಬೇಕು. ಅದಕ್ಕೆ ಇಲ್ಲಿನ ಶಿಬಿರ ಪ್ರೇರಣೆಯಾಗಲಿ. ಇಂತಹ ಶಿಬಿರ ಸಾಮಾಜಿಕ ಜಾಗೃತಿಯನ್ನು ಮೂಡಿಸುವಂತಾಗಬೇಕು ಎಂದು ಕಾರ್ಕಳ ಕಮಲಾಕ್ಷ ಕಾಮತ್ ಹೇಳಿದರು.
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಮೈನ್ ಕಾರ್ಕಳ ಇಲ್ಲಿ ನಡೆದ ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾದ ಚಿಣ್ಣರ ಬದುಕಿನ ಬಣ್ಣದ ಲೋಕ ಸರಕಾರಿ ಶಾಲಾ ಮಕ್ಕಳಿಗೆ ಮಾತ್ರ ಆಯೋಜಿಸಲಾದ “ಕಲಾ ಸಿಂಚನ -2024” ಬೇಸಿಗೆ ಶಿಬಿರವನ್ನು ಹಾಗೂ ಜನಪದ ವಾದ್ಯ ವಾದನದ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಇ. ಸಿ.ಒ ಬಾಲಕೃಷ್ಣ ನಾಯಕ್ , ಸಿ.ಆರ್.ಪಿ ಜ್ಯೋತಿ ನಾಯಕ್ , ನಿವೃತ್ತ ಬ್ಯಾಂಕ್ ಮ್ಯಾನೇಜರ್ ಗಣೇಶ್ ಕಾಮತ್, ಶಿಕ್ಷಕ ದೇವದಾಸ್ ಕೆರೆಮನೆ, ಶಿಬಿರದ ನಿರ್ದೇಶಕ ಹಿರಿಯ ರಂಗಕರ್ಮಿ ಚಿತ್ರಕಲಾವಿದ ಚಂದ್ರನಾಥ ಬಜಗೋಳಿ, ಶಿಕ್ಷಕಿಯರಾದ ಮಧುಶ್ರೀ, ಪೂಜಾ , ಅಶ್ವಿನಿ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಪರಸಪ್ಪ ಜೋಗಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಶಾಲಾ ಮುಖ್ಯ ಶಿಕ್ಷಕಿ ಕ್ಷಕಿ ಶಶಿಕಲಾ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪದವೀಧರ ಸಹಶಿಕ್ಷಕಿ ಪ್ರತಿಮಾ ದೇವದಾಸ್ ನಿರೂಪಿಸಿದರು. ಶಿಕ್ಷಕಿ ಶ್ರೇಯಾ ವಂದಿಸಿದರು.