Share this news

ಮಂಡ್ಯ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಪರವಾಗಿ ಘೋಷಣೆ ಕೂಗುವವರು ಅಪ್ಪನಿಗೆ ಹುಟ್ಟಿದವರಲ್ಲ. ಈ ಹೇಳಿಕೆಯನ್ನು ಬಹಿರಂಗವಾಗಿಯೇ ಹೇಳುತ್ತೇನೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್ಚಂದ್ರಗುರು ವಿವಾದಿತ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ತಾಕತ್ತಿದ್ರೆ ಸಂವಿಧಾನ ಬದಲಿಸಲು ಕೈ ಹಾಕಲಿ, ಸಂವಿಧಾನ ಮುಟ್ಟಿದರೆ ರಕ್ತಪಾತವಾಗುತ್ತದೆ.ನಾವು ಗುಲಾಮಗಿರಿ ಒಪ್ಪಿಕೊಳ್ಳಲು ಸಿದ್ದವಿಲ್ಲ.ನಾನು 35 ವರ್ಷ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ್ದೇನೆ. ನಮಗೆ ಮೋದಿ ಜಿಂದಾಬಾದ್ ಬೇಡ ಕರ್ನಾಟಕ ಜಿಂದಾಬಾದ್ ಬೇಕು ಎಂದರು.

ಮಹೇಶ್ಚಂದ್ರಗುರು ಹೇಳಿಕೆ ಖಂಡಿಸಿ ಬಿಜೆಪಿ ದೂರು

ಪ್ರಧಾನಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಪ್ರೊ.ಮಹೇಶ್ಚಂದ್ರಗುರು ವಿರುದ್ಧ ಮಂಡ್ಯ ಜಿಲ್ಲಾ ಬಿಜೆಪಿ ತೀವೃ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಮಂಡ್ಯ ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ಸಿ.ಟಿ ಮಂಜುನಾಥ್ ಅವರು ಮಹೇಶ್ಚಂದ್ರಗುರು ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಕೋರಿ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
ದೇಶದ ಗೌರವಾನ್ವಿತ ಪ್ರಧಾನಿಗೆ ಹಾಗೂ ಅವರನ್ನು ಆರಿಸಿದ ಕೋಟ್ಯಾಂತರ ಮತದಾರರಿಗೆ ಮಾಡಿರುವ ಅವಮಾನವಾಗಿದೆ.ಮಾತ್ರವಲ್ಲದೇಶದ ಮತದಾರರು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ

 

 

 

 

 

 

 

 

 

Leave a Reply

Your email address will not be published. Required fields are marked *