

ಕಾರ್ಕಳ,ಆ.17: ಉನ್ನತಿ ಚಾರಿಟಬಲ್ ಟ್ರಸ್ಟ್ ಇದರ 5ನೇ ವರ್ಷದ ಸಂಭ್ರಮಾಚರಣೆ, 80ನೇ ವರ್ಷದ ಸ್ವಾತಂತ್ರö್ಯ ದಿಚಾರಣೆ ಹಾಗೂ ವಿವಿಧ ಕ್ಷೇತ್ರಗಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಬೈಲೂರು ಮೈನ್ ಸರಕಾರಿ ಶಾಲೆಯಲ್ಲಿ ಜರುಗಿತು.
ಎಸ್‌ಡಿಎಂಸಿ ಅಧ್ಯಕ್ಷರಾದ ಸಚ್ಚಿದಾನಂದ ಶೆಟ್ಟಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.
ಉನ್ನತಿ ಟ್ರಸ್ಟ್ ಪ್ರತೀವರ್ಷ ಕಾರ್ಕಳ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಅರ್ಥಪೂರ್ಣವಾಗಿ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದು, ಈ ಬಾರಿ ಬೈಲೂರು ಮೈನ್ ಶಾಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಬೈಲೂರಿನ ಉದ್ಯಮಿ ರಾಮರಾಯ ಕಿಣಿ ಕಾರ್ಯಕ್ರಮ ಉದ್ಘಾಟಿಸಿದರು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಗಂಗಾ ಬೋರ್ ವೆಲ್ ಮಾಲೀಕ ವಾಸುದೇವ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ವಿದ್ಯಾರ್ಥಿವೇತನ ನೀಡುತ್ತಿರುವ ಉನ್ನತಿ ಕಾರ್ಯ ಶ್ಲಾಘನೀಯ. ಯುವಕರು ಸೇರಿ ಕಟ್ಟಿರುವ ಉನ್ನತಿ ಚಾರಿಟಬಲ್ ಟ್ರಸ್ಟ್ ಮುಂದೆಯೂ ಸಮಾಜಮುಖಿ ಕೆಲಸಗಳನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಚೆಸ್ ಹಾಗೂ ಚಿತ್ರನಟ ಪೃಥ್ವಿ ಅಂಬರ್, ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಶ್ರೀ ವಿನಾಯಕ ಜೋಗ್, ಆರರ‍್ಸ್ ನರ್ಸಿಂಗ್ ಹೋಂ ವೈದ್ಯರಾದ ಡಾ. ಶಶಿಕಿರಣ್ ಆಚಾರ್, ಉದ್ಯಮಿ ಶ್ರೀ ಪ್ರಶಾಂತ್ ಶೆಟ್ಟಿ ಬೈಲೂರು, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಶೆಟ್ಟಿ, ‘ಅಮ್ಮನ ನೆರವು’ ಚಾರಿಟೇಬಲ್ ಟ್ರಸ್ಟ್ನ ಅವಿನಾಶ್ ಶೆಟ್ಟಿ, ಶಾಲೆಯ ಮುಖ್ಯೋಪಾಧ್ಯಾಯರಾದ ಆಶಾ ಭಾನು, ಹಾಗೂ ಉನ್ನತಿ ತಂಡದ ಪ್ರಮುಖರಾದ ವಿನೋದ್ ಶೆಟ್ಟಿ ಮತ್ತು ಲಾವಣ್ಯ ಪೂಜಾರಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.
ಡಾ. ಜಿತೇಂದ್ರ ಕಿಣಿ (ಕ್ಯಾನ್ಸರ್ ಔಷಧ ಸಂಶೋಧಕರು),ಡಾ. ಶಶಿಕಿರಣ್ ಆಚಾರ್ (ವೈದ್ಯರು),ಶ್ರೀಮತಿ ಕೆ. ಅರುಂಧತಿ ಶೆಟ್ಟಿ (ನಿವೃತ್ತ ಮುಖ್ಯೋಪಾಧ್ಯಾಯರು), ಜನಾರ್ಧನ ಆಚಾರ್ಯ (ಕಾಷ್ಠಶಿಲ್ಪಿ ಹಾಗೂ ನಾಟಿ ವೈದ್ಯರು), ಶಿವಾನಂದ ಶೆಟ್ಟಿ (ಕೌಡೂರು – ಕೃಷಿಕರು), ವಿಜಯ ದೇವಾಡಿಗ (ನಿವೃತ್ತ ಹೆಡ್ ಕಾನ್ಸ್ಟೇಬಲ್), ಮೊಯ್ದಿನ್ ಎಸ್.ಕೆ. (ಶಿಕ್ಷಕರು, ಬೈಲೂರು ಮೈನ್ ಶಾಲೆ), ಸಾಗರ್ ಆಚಾರ್ಯ (ಅಗ್ನಿವೀರ್), ಮಣಿಕಂಠ (ರಾಷ್ಟ್ರಮಟ್ಟದ ವಾಲಿಬಾಲ್ ಪಟು), ಕು. ಜೀವಿತಾ ಪೂಜಾರಿ (ರಾಷ್ಟ್ರಮಟ್ಟದ ವೇಟ್‌ಲಿಫ್ಟಿಂಗ್ ಪಟು) ಸನ್ಮಾನಿಸಲಾಯಿತು.
2 ಲಕ್ಷ ವಿದ್ಯಾರ್ಥಿವೇತನ ಹಾಗೂ ಪ್ರತಿಭಾ ಪುರಸ್ಕಾರ
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿರುವ ಉನ್ನತಿ ಟ್ರಸ್ಟ್, ಈ ಬಾರಿಯೂ 32 ವಿದ್ಯಾರ್ಥಿಗಳಿಗೆ ಒಟ್ಟು 2 ಲಕ್ಷ ರೂ ವಿದ್ಯಾರ್ಥಿವೇತನವನ್ನು ವಿತರಿಸಿತು. ಇದರೊಂದಿಗೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 15 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದೇವೇಳೆ ಉನ್ನತಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಲೋಕಾರ್ಪಣೆ ಮಾಡಲಾಯಿತು.
?ಕಾರ್ಯಕ್ರಮದ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿ, ಚಲನಚಿತ್ರ ನಟ ಪೃಥ್ವಿ ಅಂಬರ್ ಅವರು ‘ಉನ್ನತಿ ಚಾರಿಟೇಬಲ್ ಟ್ರಸ್ಟ್’ನ ಅಧಿಕೃತ ವೆಬ್‌ಸೈಟ್ ಅನ್ನು ಬಿಡುಗಡೆ ಮಾಡಿದರು.
ಉನ್ನತಿ ತಂಡದ ಸದಸ್ಯರು, ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಉನ್ನತಿ ತಂಡದ ವಿನೋದ್ ಶೆಟ್ಟಿ ಸ್ವಾಗತಿಸಿದರು, ಕೌಶಿಕ್ ಅಮೀನ್ ಮುನಿಯಾಲ್ ಕಾರ್ಯಕ್ರಮ ನಿರೂಪಿಸಿದರು ಮತ್ತು ಶಾಲೆಯ ಶಿಕ್ಷಕಿ ಸುಮಾ ವಂದನಾರ್ಪಣೆಗೈದರು.








.
.
.
.
.
.
.
.
.
.
.
.
.
.
.
.
.
.
.
.
