ಕಾರ್ಕಳ: ಏರುತ್ತಿರುವ ತಾಪಮಾನದಿಂದ ನೀರಿನ ತೀವ್ರ ಸಮಸ್ಯೆಯಿಂದ ಹಸಿರು ಮೇವಿನ ಕೊರತೆ, ಏರುತ್ತಿರುವ ಪಶು ಆಹಾರದ ಬೆಲೆ, ಪಶುವೈದ್ಯರ ಸೇವೆಯ ಅಲಭ್ಯತೆಯಿಂದ ಹೈನುಗಾರರು ಹೈರಾಣವಾಗುತಿದ್ದು, ಕಳೆದ ಏಳು ತಿಂಗಳಿನಿಂದ ಪ್ರತೀ ಲೀಟರಿಗೆ ಐದು ರೂಪಾಯಿಯಂತೆ ದೊರಕಬೇಕಾಗಿದ್ದ ಪ್ರೋತ್ಸಾಹ ಧನ ಪಾವತಿಗೆ ಬಾಕಿಯಾಗಿದ್ದು ಹೈನುಗಾರರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ.
ಹೈನುಗಾರರ ಕುಟುಂಬಕ್ಕೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಲೆಂದು ಹಿಂದಿನ ಬಿಜೆಪಿ ಸರ್ಕಾರ ಪ್ರತೀ ಲೀಟರಿಗೆ 5 ರೂ ಪ್ರೋತ್ಸಾಹಧನ ಘೋಷಿಸಿತ್ತು.ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ 7 ತಿಂಗಳಿನಿಂದ ನಯಾಪೈಸೆ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ಇದರಿಂದ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಕಳೆದ ಏಳು ತಿಂಗಳಿನಿಂದ ಪ್ರೋತ್ಸಾಹ ಧನ ಖಾತೆಗೆ ಜಮೆಯಾಗದೇ ತೀರಾ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವಂತೆ ಹಾಲಿ ಪ್ರೋತ್ಸಾಹಧನ ಬಿಡುಗಡೆಗೂ ಗ್ಯಾರಂಟಿ ಕೊಡಬೇಕು ಹಾಗೂ ಪಶು ಆಹಾರಕ್ಕೂ ಕೆಜಿ ಗೆ 5 ರೂ ಸಬ್ಸಿಡಿ ನೀಡಬೇಕೆಂದು
ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕ ಸಾಣೂರು ನರಸಿಂಹ ಕಾಮತ್ ಸರ್ಕಾರವನ್ನು ಒತ್ತಾಯಿಸಿದ್ದಾರೆ