ಕಾರ್ಕಳ :ಪಡುತಿರುಪತಿ, ಚಪ್ಪರ ಶ್ರೀನಿವಾಸ ಎಂದೇ ಖ್ಯಾತಿ ಪಡೆದಿರುವ ಕಾರ್ಕಳದ ಐತಿಹಾಸಿಕ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ರಥೋತ್ಸವವು ಮೇ 9 ರಿಂದ ಆರಂಭಗೊಂಡು ಮೇ 14ರವರೆಗೆ ನಡೆಯಲಿದೆ.
ಮೇ 9 ರಂದು ಗುರುವಾರ ಧ್ವಜಾರೋಹಣ,ಮೇ 11ರಂದು ದೇವರ ಕಟ್ಟೆ ಪೂಜೆ,ಮೇ 12ರಂದು ಮೃಗಬೇಟೆ ಉತ್ಸವ,ಮೇ 13ರಂದು ಬ್ರಹ್ಮ ರಥೋತ್ಸವ ಹಾಗೂ ಮೇ 14ರಂದು ಓಕುಳಿ ಅವಭೃತ ಸ್ನಾನದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.
ರಥೋತ್ಸವ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ
ರಥೋತ್ಸವದ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು,ಮೇ 13 ರಂದು ಸಂಜೆ 4 ಗಂಟೆಯಿಂದ ಮೇ 14ರ ಮುಂಜಾನೆ 6ರವರೆಗೆ ಮೂರು ಮಾರ್ಗದಿಂದ ಸ್ಟೇಟ್ ಬ್ಯಾಂಕ್ ಜಂಕ್ಷನ್‌ವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ
ಕಾರ್ಕಳ ಪೇಟೆಗೆ ಬರುವ ಘನವಾಹನಗಳು ಬಂಗ್ಲೆಗುಡ್ಡೆ-ಹಿರಿಯಂಗಡಿ ಆನೆಕೆರೆ ಮಾರ್ಗವಾಗಿ ದಾನಶಾಲೆಯಾಗಿ ಸಂಚರಿಸಬೇಕು.
ಕಾರ್ಕಳದಿಂದ ಉಡುಪಿ, ಹೆಬ್ರಿ ಕಡೆಗೆ ಹೋಗುವ ಹಾಗೂ ಬರುವ ಬಸ್ಸುಗಳು ತಾಲೂಕು ಜಂಕ್ಷನ್‌ನಿಂದ ಕಲ್ಲೊಟ್ಟೆ,
ಮಾರ್ಕೆಟ್ ಮಾರ್ಗವಾಗಿ ಬಸ್ ನಿಲ್ದಾಣ ಪ್ರವೇಶಿಸಬೇಕು.ನಿರ್ಗಮಿಸುವ ಬಸ್ಸುಗಳು ಇದೇ ಮಾರ್ಗದಲ್ಲಿ ಸಂಚರಿಸಬೇಕು
ಲಘು ವಾಹನ ಮತ್ತು ದ್ವಿಚಕ್ರ ವಾಹನಗಳು ಸ್ಟೇಟ್ ಬ್ಯಾಂಕ್ ಜಂಕ್ಷನ್‌ನಿಂದ ಗಾಂಧಿ ಮೈದಾನವಾಗಿ ಕಾಮಧೇನು ಹೋಟೆಲ್ ಜಂಕ್ಷನ್ ಮಾರ್ಗವಾಗಿ ಸಂಚರಿಸುವಂತೆ ಉಡುಪಿ
ಜಿಲ್ಲಾಧಿಕಾರಿ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
