ಕಾರ್ಕಳ: ಪ್ರಕೃತಿ ಸಂಪತ್ತಿನಿಂದ ಸಮೃದ್ಧವಾಗಿರುವ ಕೃಷಿಗೆ ಪೂರಕವಾಗಿರುವ ಅವಿಭಜಿತ ದ.ಕ ಜಿಲ್ಲೆ ಕರ್ನಾಟಕದ ಸ್ವರ್ಗ ಎಂದು ಅಂತರಾಷ್ಟ್ರೀಯ ಕೃಷಿ ಸಾಧಕಿ ಪ್ರಶಸ್ತಿ ಪುರಸ್ಕೃತೆ ಕವಿತಾ ಮಿಶ್ರಾ ಹೇಳಿದರು.
ಅವರು ಕಣಂಜಾರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಟೆ , ಬ್ರಹ್ಮಕಲಶೋತ್ಸವ ಪ್ರಯುಕ್ತ ಸೊಮವಾರ ನಡೆದ ಮಾತೃಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ದಿಕ್ಕೂಚಿ ಭಾಷಣದಲ್ಲಿ, ರೈತ ರಕ್ತ ಸುರಿಸಿ ದುಡಿಯುವ ಫಲವಾಗಿ ದೇಶದ ಜನರು ಅನ್ನ ಉಣ್ಣುವಂತಾಗಿದೆ. ಸಾಧನೆ ಮಾಡುವ ಚಲ ಇದ್ದರೆ ಕೃಷಿ ಎಂದಿಗೂ ನಷ್ಟ ಉಂಟು ಮಾಡುವುದಿಲ್ಲ ಎಂದರು. ಮಹಿಳೆಗೆ ತಂದೆ ವಿದ್ಯೆ ಕೊಟ್ಟಾಗ , ಗಂಡ ಪ್ರೀತಿ ಕೊಟ್ಟಾಗ, ಮಗ ಆಸರೆ ಆದಗ ಯಾವುದೇ ಮಹಿಳೆಗೆ ಸಾಂತ್ವನ ಕೇಂದ್ರ ಅಗತ್ಯ ಇಲ್ಲ ಎಂದರು. ರೈತರು ಪ್ರಕೃತಿಯ ಜತೆಗೆ ಹೊಂದಿಕೊಂಡು ಮಿಶ್ರ ಬೆಳೆ ಮಾಡಿದಾಗ ನಷ್ಟ ತಪ್ಪಿಸಬಹುದು. ರೈತನ ಮಕ್ಕಳಿಗೂ ಸಮಾಜದಲ್ಲಿ ಗೌರವ ಸಿಗುವ ಕಾರ್ಯ ಆಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಮೀನಾ ಲಕ್ಷಣಿ ಅಡ್ಯಂತಾಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿಯ ಶಸ್ತ್ರ ಚಿಕಿತ್ಸಕರಾದ ಡಾ| ವೀಣಾ, ಭಾರತಿ ಶಿವಾನಂದ ಶೆಟ್ಟಿ ಪಟ್ಟದಮನೆ ಕಣಂಜಾರು, ಉದ್ಯಮಿ ರಂಜನಿ ಸುಧಾಕರ್ ಹೆಗ್ಡೆ, ಚಂದ್ರಾವತಿ ಬಿ.ಎನ್. ಪೂಜಾರಿ ಕಾಂತನಮಜಲು ಕಣಂಜಾರು, ರಾಷ್ಟ್ರೀಯ ಮಹಿಳಾ ಆಯೋಗದ ನಿಕಟಪೂರ್ವ ಸದಸ್ಯರಾದ ಶ್ಯಾಮಲಾ ಎಸ್. ಕುಂದರ್, ಮೈನಾ ಹೆಗ್ಡೆ ಭಂಡಾರ ಮನೆ ಪೆರಿಮಾರುಗುತ್ತು ನೀರೆ, ಶೋಭಾ ಅನಂತ ಹೆಗ್ಡೆ, ಮುಂಬೈ, ಡಾ| ಪೂರ್ಣಿಮ ಸುಧಾಕರ್ ಶೆಟ್ಟಿ ಕೌಡೂರು, ಕಾರ್ಕಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ,ನೀರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿದ್ಯಾ ಶಶಿಧರ್ ಶೆಟ್ಟಿ ಕಣಂಜಾರು, ಕಸ್ತೂರಿ ಶೆಟ್ಟಿ, , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಹೇಮಲತಾ, ಆನಂದ ಶೆಟ್ಟಿ ಸರಕಾರಿ ಪ್ರೌಢಶಾಲೆ ಕಣಂಜಾರುವಿನ ಮುಖ್ಯ ಶಿಕ್ಷಕಿ ನವೀನ ಕುಮಾರಿ, ನೀರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಂಕಿತಾ ನಾಯಕ್, ಗ್ರಾಮ ಪಂಚಾಯತ್ ಬೈಲೂರು ಮಾಜಿ ಉಪಾಧ್ಯಕ್ಷೆ ವನಜಾ ಆಂಚನ್ ದಾರಾಕ್ಯಾರು, ಉಪಸ್ಥಿತರಿದ್ದರು.
ಸವಿತಾ ನಾಯಕ್ ಮಡಿಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿ, ಬ್ರಹ್ಮಕಲಶದಿಂದ ಕಾರಣಿಕ ಶಕ್ತಿ ವೃದ್ಧಿಯಾಗುತ್ತದೆ, ಮಹಿಳೆಯರು ಮಕ್ಕಳಿಗೆ ದೇವಸ್ಥಾನಕ್ಕೆ ಬರುವ ಸಂಸ್ಕೃತಿ ಕಲಿಸಬೇಕು ಎಂದರು.
ಶೋಭಾ ಶಿವಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ಕುಮಾರಿ ಕಾವ್ಯ ಪೂಜಾರಿ ಕಣಂಜಾರು ಕಾರ್ಯಕ್ರಮ ನಿರೂಪಿಸಿದರು
ಸಾಧಕ ಮಹಿಳೆಯರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಆಡಳಿತ ಮೊಕ್ತೇಸರ ಸುಧೀರ್ ಹೆಗ್ಡೆ, ಜಿರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಕ್ರಮ್ ಹೆಗ್ಡೆ, ಪ್ರಧಾನ ಅರ್ಚಕ ಗುರುರಾಜ್ ಮಂಜಿತ್ತಾಯ, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಹೆಗ್ಡೆ, ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳು, ಸದಸ್ಯರು,ಆಡಳಿತ ಮಂಡಳಿ ಸದಸ್ಯರು, ಮಾಗಣೆ ಮುಖ್ಯಸ್ಥರು, ಗ್ರಾಮಸ್ಥರು, ಭಕ್ತರು ಉಪಸ್ಥಿತರಿದ್ದರು.
