ಹಾಸನ: ಇಂದಿನ ಒತ್ತಡದ ಜೀವನ ಹಾಗೂ ನಿತ್ಯದ ಜಂಜಾಟದಲ್ಲಿ ಮನುಷ್ಯ ಕೇವಲ ಹಣಗಳಿಕೆಯೇ ಜೀವನದ ಪ್ರಮುಖ ಗುರಿಯಾಗಿಸಿದ್ದಾನೆ ಆದರೆ ಹಣಗಳಿಕೆಯ ಜತೆ ಜತೆಗೆ ಆರೋಗ್ಯ ಕಾಪಾಡುವುದನ್ನು ಮರೆಯುತ್ತಿದ್ದಾನೆ, ಆರೋಗ್ಯವೇ ಭಾಗ್ಯ ಎಂಬ ನಮ್ಮ ಹಿರಿಯರ ಮಾತುಗಳನ್ನು ನಾವೆಲ್ಲ ಮೆರೆಯುತ್ತಿದ್ದೇವೆ ಎಂದರೆ ತಪ್ಪಾಗಲಾರದು.ನಾವು ಆರೋಗ್ಯವಂತನಾಗಿರಬೇಕಾದರೆ ಮುಖ್ಯವಾಗಿ ದೈಹಿಕ ಸಮತೋಲನ ಕಾಯ್ದುಕೊಳ್ಳುವ ಆಹಾರ ಪದ್ಧತಿಯೊಂದಿಗೆ ನಿತ್ಯ ನಿರಂತರ ಯೋಗ,ಧ್ಯಾನ ಮುಂತಾದ ಆರೋಗ್ಯಕರ ಆಚಾರ ವಿಚಾರಗಳ ಬಗೆಗೆ ಅರಿವಿರಬೇಕು, ನಾವೂ ದಿನನಿತ್ಯ ಯೋಗಾಭ್ಯಾಸ ಮಾಡಬೇಕೆಂದು ಹಾಸನದ ಗೋರೂರು ವಿವೇಕಾನಂದ ವಿದ್ಯಾ ಸಂಸ್ಥೆ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶಭಾನ ಗೊರೂರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕ ನವೀನ್ ರಾಜ್ ಗೊರೂರು ಮಾತನಾಡಿ, ಸದಾ ವಿದ್ಯಾರ್ಥಿಗಳ ಬದುಕು ಯೋಗದೊಂದಿಗೆ ಸರಾಗವಾಗಲಿ,ಯೋಗ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿರಂತರ ಯೋಗ ಅಧ್ಯಯನದಲ್ಲಿ ತೊಡಗಿದಾಗ ಬದುಕು ಆರೋಗ್ಯದಾಯಕವಾಗಿರುತ್ತದೆ, ವಿದ್ಯಾರ್ಥಿಗಳೆಲ್ಲರೂ ನಿತ್ಯ ಯೋಗ ಮಾಡುವ ಸಂಕಲ್ಪ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕಿ ಮಂಜುಳಾ ಗೊರೂರು, ಪೂಜಾ, ಸಬೀನಾ ಅವರು ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು,
ಶಿಕ್ಷಕಿ ಶಾಂಭವಿ ಸ್ವಾಗತಿಸಿ, ಜುಬೇದಾ ವಂದಿಸಿದರು.ಸಮೀನಾ ಅಂಜು ಕಾರ್ಯಕ್ರಮ ನಿರೂಪಿಸಿದರು.
ಮಸಂಸ್ಥೆಯ ವಿದ್ಯಾರ್ಥಿಗಳಾದ ಶಿಖರ್ ಸದಾಶಿವ ಶೆಟ್ಟಿ ಹಾಗೂ ಗುರುಕಿರಣ್ ಅವರು ಎಲ್ಲಾ ಸಹಪಾಠಿಗಳಿಗೆ ಯೋಗ ತರಬೇತಿ ನೀಡಿದರು.