ಹೆಬ್ರಿ: ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಮಲಗಿದ್ದ ಜಾನುವಾರುಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸುತ್ತಿದ್ದ ವೇಳೆ ಬೆನ್ನತ್ತಿದ್ದ ಪೊಲೀಸರ ತಂಡ ಓರ್ವ ಆರೋಪಿ ಹಾಗೂ ಜಾನುವಾರು ಸಾಗಾಟಕ್ಕೆ ಬಳಸಿದ್ದ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಗೂಡ್ಸ್ ವಾಹನದಲ್ಲಿದ್ದ ಜಾನುವಾರು ಮೃತಪಟ್ಟಿದೆ .
ಸೋಮವಾರ ರಾತ್ರಿ ಆರೋಪಿಗಳಾದ ಹಬೀಬ್ , ಬಶೀರ್(ಬಚ್ಚಿ) ಮತ್ತು ಆಸೀಫ್ ಇಕ್ಬಾಲ್ ಎಂಬವರು ಹೆಬ್ರಿ ತಾಲೂಕು ನಾಡ್ಪಾಲು ಗ್ರಾಮದ ಬೆಳಾರ್ ಎಂಬಲ್ಲಿ ರಸ್ತೆಯ ಬದಿಯಲ್ಲಿ ಮಲಗಿದ ಜಾನುವಾರನ್ನು ಕಳವು ಮಾಡಿ ಗೂಡ್ಸ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಮಾಂಸ ಮಾಡುವ ಸಲುವಾಗಿ ಕಸಾಯಿಖಾನೆಗೆ ಮಾರಾಟ ಮಾಡಲು ಸಾಗಿಸುತ್ತದ್ದ ವೇಳೆ , ಸೀತಾನದಿ ವನ್ಯಜೀವಿ ಶಾಖೆ ಸೊಮೇಶ್ವರ ವನ್ಯಜೀವಿ ವಲಯ ಉಪವಲಯ ಅರಣ್ಯಾಧಿಕಾರಿ ಎಸ್.ಮೊಹಮ್ಮದ್ ಜುನೇದ್ ಅಖ್ತರ್ ಅವರು ವಾಹನ ನಿಲ್ಲಿಸುವಂತೆ ಸೂಚನೆ ನೀಡಿದರೂ ಕೂಡಾ ವಾಹನವನ್ನು ನಿಲ್ಲಿಸದೇ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ನೆಲ್ಲಿಕಟ್ಟೆ-ಕೂಡ್ಲು ರಸ್ತೆಯಿಂದ ಮಣ್ಣುರಸ್ತೆಯಲ್ಲಿ ಹೋಗಿ ಅಜ್ಜೋಳ್ಳಿ ದರ್ಖಾಸು ಸೇತುವೆ ಬಳಿ ಚಾಲಕ ಹಬೀಬ್ ಮತ್ತು ಬಶೀರ್(ಬಚ್ಚಿ) ಎಂಬುವವರು ಚಲಿಸುತ್ತಿರುವ ವಾಹನದಿಂದ ಜಿಗಿದು ಪರಾರಿಯಾಗಿದ್ದಾರೆ. ಪೊಲೀಸರು ಆಸೀಫ್ ಇಕ್ಬಾಲ್, ಗೂಡ್ಸ್ ವಾಹನ ಮತ್ತು ಮೃತಪಟ್ಟ ಜಾನುವಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














