ಕಾರ್ಕಳ: ಜನಸ್ಪಂದನ ಸಭೆಯಲ್ಲಿ ಪರಶುರಾಮ ಥೀಮ್ ಪಾರ್ಕಿನ ಪ್ರತಿಮೆ ವಿಚಾರದಲ್ಲಿ ಕೇಳಲಾದ ಪ್ರಶ್ನೆಗೆ ಶಾಸಕ ಸುನಿಲ್ ಕುಮಾರ್ ವಿಚಲಿತರಾಗಿ ಸಭೆಯ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದವರ ಮೊಬೈಲ್ ಸೀಜ್ ಮಾಡಿ ಎಂದು ಪೊಲೀಸರಿಗೆ ಸೂಚನೆ ನೀಡಿದ ಮೇರೆಗೆ ಡಿವೈಎಸ್ಪಿ ದೌರ್ಜನ್ಯ ಎಸಗಿರುವುದು ಖಂಡನೀಯ ಎಂದು ಪುರಸಭಾ ಸದಸ್ಯ ಶುಭದ ರಾವ್ ಹೇಳಿದ್ದಾರೆ.
ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜನಸಾಮಾನ್ಯರು ಜನಸ್ಪಂದನ ಸಭೆಗೆ ಬರುತ್ತಾರೆ, ಆದರೆ ಪ್ರಶ್ನೆ ಕೇಳಿದವರ ಮೇಲೆ ಕೇಸ್ ಹಾಕಿ ಅರೆಸ್ಟ್ ಮಾಡುತ್ತೇವೆ ಎನ್ನುತ್ತಾರೆ, ಡಿವೈಎಸ್ಪಿ ಗೆ ದೌರ್ಜನ್ಯ ಎಸಗುವ ಅಧಿಕಾರ ಕೊಟ್ಟುವರು ಯಾರು? ಇಂತಹ ದಬ್ಬಾಳಿಕೆ ನಡೆಸಿದರೆ ಈ ಜನಸ್ಪಂದನ ಸಭೆಗೆ ಏನು ಅರ್ಥವಿದೆ ಎಂದು ಪ್ರಶ್ನಿಸಿದ್ದಾರೆ.
ಗ್ರಾಮ ಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸಿದ್ದ ರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಜನಸ್ಪಂದನ ಸಭೆಗಳನ್ನು ಆಯೋಜಿಸಿದರೆ ಈ ಸಭೆಗೆ ಬರುವವರ ವಿರುದ್ಧ ಪೊಲೀಸರು ದೌರ್ಜನ್ಯ ಎಸಗುತ್ತಾರೆ ಎಂದಾದರೆ ಈ ಸಭೆಗೆ ಬರುವ ಔಚಿತ್ಯ ಏನಿದೆ. ಪ್ರಶ್ನೆ ಕೇಳಿದವರ ವಿರುದ್ಧ ದೌರ್ಜನ್ಯ ಎಸಗಿದ ಡಿವೈಎಸ್ಪಿ ವಿರುದ್ಧ ಮುಖ್ಯಮಂತ್ರಿಗಳಿಗೆ ದೂರು ನೀಡಲಾಗುವುದು ಎಂದು ಶುಭದ ರಾವ್ ಹೇಳಿದ್ದಾರೆ.
