ಕಾರ್ಕಳ: ರೋಟರಿ ಸಂಸ್ಥೆ ಕಾರ್ಕಳ, ಅನ್ಸ್ ಕ್ಲಬ್ ಕಾರ್ಕಳ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಕಾರ್ಕಳ, ಸರಕಾರಿ ಸಾರ್ವಜನಿಕ ಆಸ್ಪತ್ರೆ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ನಡೆಯಿತು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶಶಿಕಲಾ ಇವರು ಪ್ರಾಸ್ತವಿಕವಾಗಿ ಮಾತನಾಡಿ ಸ್ತನ್ಯ ಪಾನ ಮಹತ್ವವನ್ನು ವಿವರಿಸಿ ಪ್ರತಿಜ್ಞಾವಿಧಿ ಬೋಧಿಸಿದರು. ಸಂಪನ್ಮೂಲ ವ್ಯಕ್ತಿ ಮಕ್ಕಳ ತಜ್ಞರಾದ ಡಾ. ಸೌಜನ್ಯ ಇವರು ಸ್ತನ್ಯ ಪಾನದ ಮಹತ್ವ ಮಗುವಿನ ಆರೈಕೆ ಹಾಗೂ ತಾಯಿಯ ಜವಾಬ್ದಾರಿಯ ಕುರಿತು ವಿವರವಾದ ಮಾಹಿತಿ ನೀಡಿದರು. ರೋಟರಿ ಸಂಸ್ಥೆಯ ಅಧ್ಯಕ್ಷ ಇಕ್ಬಾಲ್ ಅಹಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ವೇದಿಕೆ ಯಲ್ಲಿ ENT ತಜ್ಞರಾದ ಡಾ. ಅನಂತ್ ಕಾಮತ್, ಅನ್ಸ್ ಕ್ಲಬ್ ಅಧ್ಯಕ್ಷೆ ಆನ್ಸ್ ವಿನಯ ಶೆಟ್ಟಿ ಕಾರ್ಕಳ ರೋಟರಿ ಸಂಸ್ಥೆಯ ಕಾರ್ಯದರ್ಶಿ ಗಣೇಶ್ ಸಾಲಿಯಾನ್, ವಲಯ ಸೇನಾನಿ ಸುರೇಶ್ ನಾಯಕ್, ನಿರ್ಗಮಿತ ಸಹಾಯಕ ಗೌವರ್ನರ್ ಶೈಲೇಂದ್ರ ರಾವ್, ನಿಯೋಜಿತ ರೋಟರಿ ಸಂಸ್ಥೆ ಅಧ್ಯಕ್ಷ ನವೀನ್ ಶೆಟ್ಟಿ ಇವರು ಉಪಸ್ಥಿತರಿದ್ದರು
.ಈ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಹಾಗೂ ಅನ್ಸ್ ಕ್ಲಬ್ ನ ಅಧ್ಯಕ್ಷರು ಹಾಗೂ ಸದಸ್ಯರು, ಕಾರ್ಕಳ ಪುರಸಭಾ ವ್ಯಾಪ್ತಿಯ ಆಯ್ದ ತಾಯಂದಿರು ಹಾಗೂ ಮಕ್ಕಳು, ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳು, ಸರಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು. ಡಾ. ಶಶಿಕಲಾ ಇವರು ಸ್ವಾಗತಿಸಿದರು, NCD ವಿಭಾಗದ ಆಪ್ತ ಸಮಾಲೋಚಕ ಕಿರಣ್ ಬಾಬು ಇವರು ಕಾರ್ಯಕ್ರಮ ನಿರೂಪಿಸಿದರು ಶಿವಕುಮಾರ್ ವಂದಿಸಿದರು.
`