ಸಿದ್ದಾಪುರ: ಯೋಗಾಸನ ಕೇವಲ ಆಸನವಲ್ಲ ಅದು ದೇಹ ಮತ್ತು ಮನಸ್ಸುಗಳನ್ನು ಸೀಮಿತವಾಗಿಡುವ ಸಾಧನ. ಯೋಗ ವಿಚಾರ ಪುರಾಣಗಳಲ್ಲಿ ಉಲ್ಲೇಖವಿದೆ.ಯೋಗದ ಆರಾಧ್ಯ ದೈವ ಶಿವನಾಗಿರುತ್ತಾನೆ. ಯೋಗ ಗುರು ಪತಂಜಲಿ ಇದನ್ನು ಜಗತ್ತಿಗೆ ಬರಹ ರೂಪದಲ್ಲಿ ನೀಡಿದರು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಶೇಖರ ಶೆಟ್ಟಿಗಾರ ಆರ್ಡಿ ಹೇಳಿದರು.
ಅವರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಮತ್ತು ಸರಸ್ವತಿ ವಿದ್ಯಾಲಯ ಸಿದ್ದಾಪುರ ಇವರ ಜಂಟಿ ಆಶ್ರಯದಲ್ಲಿ ಸಿದ್ದಾಪುರದ ಸರಸ್ವತಿ ವಿದ್ಯಾಲಯದಲ್ಲಿ ನಡೆದ ಪ್ರಾಂತ ಮಟ್ಟದ ಯೋಗಾಸನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ಸರಸ್ವತಿ ವಿದ್ಯಾಲಯ ಸಿದ್ದಾಪುರ ಆಡಳಿತ ಮಂಡಳಿಯ ಅಧ್ಯಕ್ಷ ಗೋಪಾಲಕೃಷ್ಣ ಕಾಮತ್ , ಆಡಳಿತ ಮಂಡಳಿಯ ಸದಸ್ಯ ಶ್ರೀನಾಥ್ ಪೈ , ವಿದ್ಯಾಭಾರತಿ ಕರ್ನಾಟಕ ಪ್ರಾಂತ ಯೋಗ ಶಿಕ್ಷಣ ಪ್ರಮುಖ್ ಮಂಜುನಾಥ ಬೆಂಗಳೂರು, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷ ಪಾಂಡುರAಗ ಪೈ, ಕಾರ್ಯದರ್ಶಿ ಮಹೇಶ ಹೈಕಾಡಿ , ಜಿಲ್ಲಾ ಯೋಗ ಪ್ರಮುಖ್ ಸಂಜಯ್, ಅಂಪಾರು ವಲಯದ ಶಿಕ್ಷಣ ಸಂಯೋಜಕ ಶಂಕರ್. ಯು, ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ವೇತಾ, ಆಡಳಿತಾಧಿಕಾರಿ ಶ್ರೀಮತಿ ಸೌಭಾಗ್ಯ , ಸರಸ್ವತಿ ಶಿಶುಮಂದಿರದ ಸಂಯೋಜಕಿ ಜಯಶೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಂತ ಯೋಗಾಸನ ಸ್ಪರ್ಧೆಯಲ್ಲಿ ರಾಷ್ಟ್ರೀಯ ಯೋಗಾಸನ ತೀರ್ಪುಗಾರರಾಗಿ ಅಶೋಕ, ಸವಿತಾ, ಸಬಿತ, ಅಮಿತ್, ಸುಜಾತ ಶೆಟ್ಟಿ, ಸಂಜೀವ್ ಮೊಗವೀರ, ಚೆನ್ನಮ್ಮ,ನವೀನ್, ಸುಮಾ, ಶರತ್ ತೀರ್ಪು ನೀಡಿದರು.
ವೀರೇಶ, ಪ್ರವೀಣ್ , ನಮಿತಾ ಯೋಗಾಶನ ಸ್ಪರ್ಧೆಯ ಅಂಕಣವನ್ನು ನಿರ್ವಹಣೆ ಮಾಡಿದರು. ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳು ಯೋಗ-ಯಕ್ಷಗಾನ ಸಮ್ಮಿಲನದ ಸಾಂಸ್ಕೃತಿಕ ಪ್ರದರ್ಶನ ನೀಡಿದರು.
ಸ್ಪರ್ಧೆಗೆ ಬೆಳಗಾವಿ, ಬೆಂಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿ, ಕಲಬುರ್ಗಿ ಜಿಲ್ಲೆಯಿಂದ 116 ವಿದ್ಯಾರ್ಥಿಗಳು ಆಗಮಿಸಿದ್ದು, 61ಶಿಕ್ಷಕರು , ಸಮಿತಿಯ ಸದಸ್ಯರು , ಕಾರ್ಯಕರ್ತರು ಸೇರಿದಂತೆ ಒಟ್ಟು 147 ಮಂದಿ ಭಾಗವಹಿಸಿದರು.
ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ವೇತ ಸ್ವಾಗತಿಸಿ, ಆಡಳಿತ ಅಧಿಕಾರಿ ಶ್ರೀಮತಿ ಸೌಭಾಗ್ಯ ವಂದಿಸಿ, ಮಾತಾಜಿ ಶ್ರೀಮತಿ ಶಶಿಕಲಾ ನಿರೂಪಿಸಿದರು.
`