ಕಾರ್ಕಳ: ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಆಗಸ್ಟ್.3 ರಂದು ನಡೆದಿದೆ.
ಕುಕ್ಕುಂದೂರಿನ ವಸಂತಿ ಎಂಬವರ ಪತಿ ವಿಶ್ವನಾಥ್ (45) ಕಳೆದ 10 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಳುತ್ತಿದ್ದು, ಉಡುಪಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆಗಸ್ಟ್.3 ರಂದು ವಸಂತಿ ಅವರು ಕೆಲಸಕ್ಕೆ ಹೋಗುವಾಗ ಮನೆಯಲ್ಲಿದ್ದ ಅವರ ಪತಿ ವಿಶ್ವನಾಥ್ ಸಂಜೆ ಕೆಲಸದಿಂದ ಮನೆಗೆ ವಾಪಾಸಾಗುವ ವೇಳೆಗೆ ನಾಪತ್ತೆಯಾಗಿದ್ದಾರೆ. ವಿಶ್ವನಾಥ್ ಅವರು ಈವರೆಗೂ ಮನೆಗೆ ವಾಪಾಸಾಗದೆ, ಸಂಬAಧಿಕರ ಮನೆಯಲ್ಲಿಯೂ ಇರದೇ, ಹುಡುಕಾಡಿದರೂ ಪತ್ತೆಯಾಗದ ಹಿನ್ನಲೆಯಲ್ಲಿ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















`
