ಹೆಬ್ರಿ: ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಅಧ್ಯಾಪಕರಾದ ಪ್ರಕಾಶ ಪೂಜಾರಿ ಮತ್ತು ಅಧ್ಯಾಪಕಿ ಶ್ರೀಮತಿ ವನಿತಾ ಅವರನ್ನು ಬೀಳ್ಕೊಡುವ ಕಾರ್ಯಕ್ರಮವು ಆ.19 ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ ಎಂ ಸಿ ನಿಯೋಜಿತ ಅಧ್ಯಕ್ಷರಾದ ವಿಜಯೇಂದ್ರ ಶೆಟ್ಟಿ ವಹಿಸಿದ್ದರು. ಪ್ರಾಂಶುಪಾಲರಾದ ಉಮೇಶ್, ಉಪ ಪ್ರಾಂಶುಪಾಲರಾದ ದಿವಾಕರ ಮರಕಾಲ ಎಸ್ ಮತ್ತು ಕಾಲೇಜು ಉಪನ್ಯಾಸಕ ವರ್ಗದವರು, ಪ್ರೌಢ ಶಾಲಾ ಅಧ್ಯಾಪಕರು,ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಮಾಜ ವಿಜ್ಞಾನ ಶಿಕ್ಷಕರಾದ ಪ್ರವೀಣ ಶೆಟ್ಟಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜೇಗೌಡ ಅವರು ಧನ್ಯವಾದವಿತ್ತರು. ಕನ್ನಡ ಭಾಷಾ ಅಧ್ಯಾಪಕರಾದ ಮಂಜುನಾಥ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
ವರ್ಗಾವಣೆಗೊಂಡ ಅಧ್ಯಾಪಕರಿಗೆ ಶಾಲಾ ಸಹೋದ್ಯೋಗಿಗಳು ವಿದಾರ್ಥಿಗಳು ಶುಭ ಹಾರೈಸಿದರು.
`