Share this news

ಉತ್ತರಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದಕ್ಕೆ ಕೋಪಗೊಂಡ ಪತಿ ಮಹಾಶಯ ತನ್ನ ಪತ್ನಿಗೆ ತಲಾಖ್ ನೀಡಿದ ಘಟನೆ ನಡೆದಿದೆ. ತಲಾಖ್ ನಿಷೇಧದ ನಡುವೆಯೂ ತಲಾಖ್ ನೀಡಿದ ಹಿನ್ನೆಲೆಯಲ್ಲಿ ಆತನ ವಿರುದ್ಧ ಪತ್ನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಯೋಧ್ಯೆಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಹೊಗಳಿದ್ದಕ್ಕಾಗಿ ಪತಿ ಮನೆಯವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.
ಈ‌ ಕುರಿತು ತಲಾಖ್ ಬಲಿಪಶು ಮಹಿಳೆ ಮರಿಯಮ್ ಷರೀಫ್ ಮಾತನಾಡಿ, ನಾನು ಬಹ್ರೈಚ್‌ನ ಥಾಣಾ ಜಾರ್ವಾಲ್ ರಸ್ತೆಯ ಮೊಹಲ್ಲಾ ಸರೈ ನಿವಾಸಿಯಾಗಿದ್ದೇನೆ. ನನಗೆ ಅಯೋಧ್ಯಾದ ಕೊಟ್ವಾಲಿ ನಗರದ ಮೊಹಲ್ಲಾ ಡೆಲ್ಲಿ ದರ್ವಾಜಾ ನಿವಾಸಿಯಾಗಿರುವ ಇಸ್ಲಾಂ ಅವರ ಮಗ ಅರ್ಷದ್‌ ಜತೆ 2023ರ ಡಿ 13ರಂದು ಮದುವೆ ಮಾಡಲಾಗಿತ್ತು. ಎರಡೂ ಕಡೆಯವರ ಒಪ್ಪಿಗೆ ಮೇರೆಗೆ ನನ್ನ ತಂದೆ, ತಮ್ಮ ಶಕ್ತಿಗೂ ಮೀರಿ ಖರ್ಚು ಮಾಡಿ ಮದುವೆ ಮಾಡಿಸಿಕೊಟ್ಟಿದ್ದರು ಎಂದು ತಿಳಿಸಿದ್ದಾಳೆ. ಮದುವೆ ಬಳಿಕ ನಾನು ನಗರದಲ್ಲಿ ಹೊರಗೆ ಹೋದಾಗ ಅಯೋಧ್ಯಾ ಧಾಮದ ರಸ್ತೆಗಳು, ಸುಂದರೀಕರಣ, ಅಭಿವೃದ್ಧಿ ಹಾಗೂ ಅಲ್ಲಿನ ವಾತಾವರಣ ಕಂಡು ಇಷ್ಟಪಟ್ಟಿದ್ದೆ. ಇದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಗಂಡನ ಎದುರು ಶ್ಲಾಘಿಸಿದ್ದೆ.ಸಂತ್ರಸ್ತೆಯು ಯೋಗಿಜಿ ಮತ್ತು ಮೋದಿಜಿ ಅದ್ಭುತವಾದ ಕೆಲಸ ಮಾಡಿದ್ದಾರೆ ಎಂದು ನಾನು ಹೇಳಿದೆ. ನನ್ನ ಗಂಡ ಮತ್ತು ನನ್ನ ಅತ್ತೆಯವರಿಗೆ ಇದು ಇಷ್ಟವಾಗಲಿಲ್ಲ. ಅವರು ನನ್ನನ್ನು ನಿಂದಿಸಿದರು ಮತ್ತು ಥಳಿಸಿ ತಲಾಖ್ ನೀಡಿ ನನ್ನನ್ನು ತವರು ಮನೆಗೆ ಕಳುಹಿಸಿದರು.

ಹಿರಿಯರ ಸಮ್ಮುಖದಲ್ಲಿ ನಡೆದ ರಾಜಿಸಂಧಾನ ನಡೆದಿತ್ತು. ಇದಾದ ಬಳಿಕ ಆಗಸ್ಟ್ 05ರಂದು ನನ್ನ ಪತಿ ಸಿಎಂ ಯೋಗಿ ಹಾಗೂ ಪ್ರಧಾನಿ ಮೋದಿಯನ್ನು ನಿಂದಿಸಲು ಶುರು ಮಾಡಿದರು.ಸ್ವಲ್ಪ ದಿನಗಳ ಬಳಿಕ ಆಕೆಗೆ ತಲಾಕ್ ನೀಡಿದ್ದು, ಈ ಬಗ್ಗೆ ಕೇಳಲು ಪತಿಯ ಮನೆ ಬಳಿ ಹೋದಾಗ ಆಕೆಯ ಮುಖದ ಮೇಲೆ ಬಿಸಿ ಸಾಂಬಾ‌ರ್ ಎರಚಿದ್ದಾರೆ.ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಕೆ ನೀಡಿದ ದೂರನ್ನು ಆಧರಿಸಿ ಪತಿ ಸೇರಿದಂತೆ ಆತನ ಕುಟುಂಬಸ್ಥರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

                        

                          

                        

                          

 

`

Leave a Reply

Your email address will not be published. Required fields are marked *