Share this news

ಮಣಿಪಾಲ : ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದಲ್ಲಿ ಗುರುವಾರ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲೆಯ ನಿವೃತ್ತ ಉಪನಿರ್ದೇಶಕರಾದ ಆರ್.ಬಿ. ನಾಯಕ್, ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನದೊಂದಿಗೆ ಮುನ್ನಡೆಯಬೇಕು, ಶಿಸ್ತುಬದ್ಧ ಶಿಕ್ಷಣ ಸಾಧನೆಗೆ ಮೂಲಮಂತ್ರವಾಗಿದ್ದು ಜ್ಞಾನಸುಧಾ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಶುಭ ಹಾರೈಸಿದರು.

ನಿವೃತ್ತ ಶಿಕ್ಷಕರಾದ ವಿವೇಕಾನಂದ ಸರಕಾರಿ ಹಿ.ಪ್ರಾ.ಶಾಲೆಯ ಸದಾನಂದ ಕೆ.ಎಸ್, ಸರಕಾರಿ ಹಿ.ಪ್ರಾ.ಶಾಲೆ ರಾಜೀವ ನಗರದ ಶ್ರೀಮತಿ ಕಲ್ಪನ, ಎಮ್.ಜೆ.ಸಿಯ ಶ್ರೀಮತಿ ಗುಲಾಬಿ ಸರಕಾರಿ ಹಿ.ಪ್ರಾ.ಶಾಲೆ ವಳಕಾಡು ಇಲ್ಲಿಯ ಶ್ರೀಮತಿ ಹರಿಣ ಇವರನ್ನು ಅಜೆಕಾರು ಪದ್ಮಗೋಪಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಅಮೆಚೂರ್ ಅಥ್ಲೆಟಿಕ್ಸ್ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಚಿರಾಗ್ ಸಿ ಪೂಜಾರಿ ಹಾಗೂ ಸ್ವಿಮ್ಮಿಂಗ್‌ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ನಿಧಿ ಇವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಮಣಿಪಾಲ ಟ್ರಸ್ಟ್ನ ಸಂಚಾಲಕರಾದ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಆಂಗ್ಲ ಭಾಷಾ ಉಪನ್ಯಾಸಕಿ ಶ್ರೀಮತಿ ಶಮಿತ ಕಾರ್ಯಕ್ರಮ ನಿರೂಪಿಸಿದರು.

 

 

                        

                          

                        

                       

Leave a Reply

Your email address will not be published. Required fields are marked *