ಮಂಗಳೂರು : ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆಯನ್ನು ಖಂಡಿಸಿ ಮಂಗಳೂರಿನ ಮಲ್ಲಿಕಟ್ಟೆ ಸರ್ಕಲ್ ಬಳಿ ವಿಹೆಚ್ಪಿ ಪ್ರತಿಭನೆ ಮಾಡಿ ಧರಣಿ ನಡೆಸಿದೆ .
ಈ ಸಂದರ್ಭ ಮಾತನಾಡಿರುವ ಶರಣ್ ಪಂಪ್ ವೆಲ್, ಈದ್ ಮೆರವಣಿಗೆ ವೇಳೆ ಎಲ್ಲಾ ಹಿಂದುಗಳು ದಾಳಿ ಮಾಡಿದರೆ ಏನಾಗಬಹುದು ಎಂಬ ಊಹೆ ಇದೆಯಾ.ಸೋಮವಾರ ಈದ್ ಮಿಲಾದ್ ಮೆರವಣಿಗೆಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದ್ದಾರೆ.
ಅನುಮತಿ ಕೊಟ್ಟರೆ ಮತ್ತೆ ಇವರು ಗಲಭೆ ಮಾಡುತ್ತಾರೆ ಇದಕ್ಕೆ ನೇರವಾಗಿ ರಾಜ್ಯ ಸರ್ಕಾರವೇ ಹೊಣೆ ಆಗುತ್ತದೆ ಎಂದು ಕಿಡಿಕಾರಿದ್ದಾರೆ.
ನಾಗಮಂಗಲ ದಲ್ಲಿ ನಡೆದ ಗಲಭೆ ಭಯೋತ್ಪಾದಕ ಕೃತ್ಯ. ಗಣೇಶೋತ್ಸವ ನಡೆಸಬಾರದೆಂದು ಪೂರ್ವನಿಯೋಜಿತ ಕೃತ್ಯ. ಇದು ಕೋಮುಗಲಭೆ ಅಲ್ಲ, ಇದು ಗಣೇಶೋತ್ಸವ ಸಮಿತಿಯ ಮೇಲೆ ನಡೆದಿರುವ ದಾಳಿ. ಇಸ್ಲಾಮಿಕ್ ಭಯೋತ್ಪಾದಕರಿಂದ ಹಿಂದೂಗಳ ಮೇಲೆ ದಾಳಿ ಎಂದು ಆರೋಪಿಸಿದ್ದಾರೆ.
ಗೃಹ ಸಚಿವರು ಆಕಸ್ಮಿಕ ಘಟನೆ ಎಂದು ಹೇಳಿದ್ದಾರೆ. ನಿಮ್ಮ ಇಲಾಖೆಯ ಪೊಲೀಸರ ಮೇಲೆ ಹಲ್ಲೆ ಆಗಿ ಗಾಯಗೊಂಡಿದ್ದಾರೆ. ಇದು ನಿಮಗೆ ಸಣ್ಣ ಘಟನೆನಾ ಎಂದು ಪ್ರಶ್ನಿಸಿದ್ದಾರೆ. ಡಿ.ಜೆ.ಹಳ್ಳಿ, ಕೆಜೆ ಹಳ್ಳಿ, ಮಂಗಳೂರಿನ ಡಿ.ಸಿ.ಕಚೇರಿ, ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಘಟನೆಗಳ ನಂತರವೂ ಎಚ್ಚೆತ್ತುಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
in