Share this news

ಹೆಬ್ರಿ: ಉಡುಪಿ ಶ್ರೀಕೃಷ್ಣ ಮಠ ಮತ್ತು ಉಡುಪಿ ಜಿಲ್ಲಾ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘದ ವತಿಯಿಂದ 2023 – 24 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 125 / 125 ಮತ್ತು 124 ಅಂಕಗಳನ್ನು ಗಳಿಸಿದ ವಿವಿಧ ಸಂಸ್ಥೆಯ ಸಂಸ್ಕೃತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವು ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಿತು.

ಈ ಸಮಾರಂಭದಲ್ಲಿ ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮೇಧಾ ಉಡುಪ, ಭೂಮಿಕಾ ಎಸ್ , ಸಮೀಕ್ಷಾ ಎನ್ , ಸುಮಿತಾ ಬಾಯರಿ , ನಮಿತಾ, ಪದ್ಮಜಾ, ಸಿಂಚನಾ ಎಸ್ ಭಟ್, ಶ್ರೀನಿಧಿ ನಾಯಕ್, ಪವನ್ ಹೆಬ್ಬಾರ್, ವೇದಾನಂದ ಶರ್ಮಾ ಹಾಗೂ ಪ್ರಣಮ್ ಜಿ ಪೂಜಾರಿ, ಒಟ್ಟು 11 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಶಾಲು, ಶ್ರೀಕೃಷ್ಣನ ಪ್ರಸಾದ ನೀಡಿ ಪರ್ಯಾಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಗೌರವಿಸಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಡಯಟ್ ಉಪ ಪ್ರಾಂಶುಪಾಲ ಅಶೋಕ್ ಕಾಮತ್, ಯಲ್ಲಮ್ಮ, ಮಧುಸೂದನ ಭಟ್, ಪ್ರಭಾಕರ್ ಭಟ್, ಅಶೋಕ್ ಹೆಗಡೆ , ಸಂಸ್ಥೆಯ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಮತ್ತು ಪೋಷಕರು ಉಪಸ್ಥಿತರಿದ್ದರು.

                       in 

                          

                        

                       

Leave a Reply

Your email address will not be published. Required fields are marked *