Share this news

ಕಾರ್ಕಳ: ಅಮ್ಮನ ನೆರವು ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮವು ಸಾಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ದಿ. ಡಾ ಉದಯ ಕುಮಾರ್ ಹೆಗ್ಡೆ ವೇದಿಕೆಯಲ್ಲಿ ಗುರುವಾರ ನಡೆಯಿತು.
ಉದ್ಯಮಿ ಬರೋಡ ಶಶಿಧರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು
ಜ್ಞಾನಸುಧ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ ಸುಧಾಕರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜ ಸೇವೆಯೇ ಜೀವಾಳವೆಂದು ಭಾವಿಸಿ ತನ್ನ ದುಡಿಮೆ ಒಂದು ಪಾಲನ್ನು ಸಮಾಜದ ಬಡವರ್ಗದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಮೀಸಲಿಟ್ಟಿರುವ ಅವಿನಾಶ್ ಶೆಟ್ಟಿ ಯವರಂತಹ ಯುವಕರು ಸಮಾಜಕ್ಕೆ ಆದರ್ಶಪ್ರಾಯರು‌, ಅವರ ನಿಸ್ವಾರ್ಥ ಸೇವೆ ನಿಜಕ್ಕೂ ಸ್ಲಾಘನೀಯ, ಅವರ ದುಡಿಮೆಯಲ್ಲಿ ಅವರ ಬೆವರು ಇದೆ, ವಿದ್ಯಾರ್ಥಿಗಳೇ ಸ್ವಾಭಿಮಾನಿಗಳಾಗಿ ಬದುಕಿ , ನಿಮಗೆ ಸಿಕ್ಕಿದ ಏನು ಪ್ರೋತ್ಸಾಹ ಇದೆಯೋ ಅದು ನೀವು ಬೆಳೆದು ದೊಡ್ಡವರಾದ ಬಳಿಕ ಬೇರೆಯವರಿಗೆ ಸಹಾಯ ಹಸ್ತ ನೀಡುವಂತಾಗಬೇಕೆಂದರು. ಯಾರು ದೀನ ದಲಿತರ ಬಗ್ಗೆ ಕಾಳಜಿ , ಸೇವೆ ಮಾಡುತ್ತಾರೋ ಅವರಿಗೆ ದೈವತ್ವದ ಶಕ್ತಿ ಬರುತ್ತದೆ ಇಂತಹ ಯುವಕರು ಕೇವಲ ಕುಟುಂಬದ ಆಸ್ತಿಯಲ್ಲ ಸಮಾಜದ ಆಸ್ತಿ ಎಂದರು.

ಕಾರ್ಕಳ ಟೈಗರ್ಸ್ ಬೋಳ ಪ್ರಸಾದ್ ಕಾಮತ್, ಪಿ ಡಬ್ಲ್ಯೂಡಿ ಸೋಮಶೇಖರ್, ಉಡುಪಿ ಜಿಲ್ಲಾ ಬಜರಂಗದಳ ಸಂಚಾಲಕಸುನಿಲ್ ಕೆ ಆರ್ ,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿ, ಸಾಣೂರು ಯುವಕ ಮಂಡಲ ಅಧ್ಯಕ್ಷ
ಪ್ರಸಾದ್ ಶೆಟ್ಟಿ , ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯ ವಸಂತ್, ಉಪಸ್ಥಿತರಿದ್ದರು
ಅಮ್ಮನ ನೆರವು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ,ಪುರಸಭಾ ಸದಸ್ಯ ಅವಿನಾಶ್ ಜಿ ಶೆಟ್ಟಿಯವರ ನೇತೃತ್ವದಲ್ಲಿ ಪಿಯುಸಿಯಲ್ಲಿ 90% ಕಿಂತ ಹೆಚ್ಚು ಅಂಕ ಗಳಿಸಿದ ಬಡ ಸರಕಾರಿ ಕಾಲೇಜಿನ 100 ವಿದ್ಯಾರ್ಥಿಗಳಿಗೆ
ಸುಮಾರು 10 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿ,
ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸುಜಾತ ಕಾಮತ್ ವಂದಿಸಿದರು.
ಈ ಸಂದರ್ಭದಲ್ಲಿ ಅವಿನಾಶ್ ಶೆಟ್ಟಿ ಯವರನ್ನು ಸಾಣೂರು ಪದವಿ ಪೂರ್ವ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು

 

 

 

                       in 

 

 

 

 

 

Leave a Reply

Your email address will not be published. Required fields are marked *