ಕಾರ್ಕಳ: ಕಳೆದ 2011ರಲ್ಲಿ ಈದು ಗ್ರಾಮದ ಗುಂಡಿ ಸದಾಶಿವ ಗೌಡ ಎಂಬವರ ಹತ್ಯೆ ಪ್ರಕರಣಕ್ಕೆ ಸಂಬAಧಪಟ್ಟAತೆ ಈ ಕೃತ್ಯದಲ್ಲಿ ಭಾಗಿಯಾಗಿದ್ದರು ಎನ್ನುವ ಆರೋಪದಲ್ಲಿ ಬಂಧಿತರಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಕ್ಸಲರಾದ ಬೆಂಗಳೂರಿನ ರಮೇಶ್ ಹಾಗೂ ಚಿಕ್ಕಮಗಳೂರಿನ ಕನ್ಯಾ ಕುಮಾರಿಯನ್ನು ಬೆಂಗಳೂರು ಪೊಲೀಸರು ಭಾರೀ ಭದ್ರತೆಯಲ್ಲಿ ಸೋಮವಾರ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಪೊಲೀಸ್ ಮಾಹಿತಿದಾರ ಎನ್ನುವ ಕಾರಣಕ್ಕೆ ಸದಾಶಿವ ಗೌಡನನ್ನು ಅಪಹರಿಸಿದ್ದ ನಕ್ಸಲರ ತಂಡ ಕಬ್ಬಿನಾಲೆಯ ದಟ್ಟ ಅರಣ್ಯದಲ್ಲಿ ಭೀಕರವಾಗಿ ಹತ್ಯೆಗೈದು ಪರಾರಿಯಾಗಿತ್ತು. ಈ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಹೆಬ್ರಿ ಹಾಗೂ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಬೆಂಗಳೂರಿನ ರಮೇಶ್ ಹಾಗೂ ಚಿಕ್ಕಮಗಳೂರಿನ ಕನ್ಯಾ ಕುಮಾರಿ ಸೇರಿದಂತೆ ಹಲವಾರು ಆರೋಪಿಗಳನ್ನು ಬಂಧಿಸಿತ್ತು. ಈ ಪ್ರಕರಣದಲ್ಲಿ ರಮೇಶ್ ಹಾಗೂ ಕನ್ಯಾ ಕುಮಾರಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿಗಳಾಗಿದ್ದಾರೆ.
ಇವರಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಅ.21ಕ್ಕೆ ಮುಂದೂಡಿದರು.
ನ್ಯಾಯಾಲಯದಿAದ ಹೊರಬಂದ ರಮೇಶ್ ಹಾಗೂ ಕನ್ಯಾ ಕುಮಾರಿ ನಕ್ಸಲರು ದೇಶಭಕ್ತರು, ಮಾವೋವಾದ ಜಿಂದಾಬಾದ್ ಎಂದು ಘೋಷಣೆ ಕೂಗಿದರು. ಬಳಿಕ ಪೊಲೀಸರು ಭಾರೀ ಭದ್ರತೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದರು.
in