ಕಾರ್ಕಳ: ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ (ರಿ)ಉಡುಪಿ ಜಿಲ್ಲೆ ಇದರ ಕಾರ್ಕಳ ತಾಲೂಕು ಖಜಾಂಚಿಯಾಗಿ ಯುವ ಉದ್ಯಮಿ,ಸಾಮಾಜಿಕ ಕಾರ್ಯಕರ್ತ, ಪಿ.ಎಂ.ಶ್ರೀ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡಬೆಟ್ಟು ಮಾಳ ಇಲ್ಲಿನ ಎಸ್ ಡಿ ಎಂ ಸಿ ಅಧ್ಯಕ್ಷ ಕೆ.ಶಶಿಧರ್ ಭಟ್ ಆಯ್ಕೆಯಾಗಿರುತ್ತಾರೆ.
ಶಾಲೆ ಅಧ್ಯಕ್ಷರಾಗಿದ್ದುಕೊಂಡು ಕಲಿಕಾ ಪೂರಕ ವಾತಾವರಣ ನಿರ್ಮಾಣ,ಸುಸಜ್ಜಿತ ಕಟ್ಟಡ, ಕಲಿಕೋಪಕರಣ,ಪೀಠೋಪಕರಣ,ಉತ್ತಮ ಶಿಕ್ಷಕರನ್ನು ಒದಗಿಸುವಲ್ಲಿ ಸಹಕರಿಸಿದ್ದು, ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರದ ತಾಲೂಕು ಘಟಕದ ನೂತನ ಖಜಾಂಚಿಯಾಗಿ ಆಯ್ಕೆಯಾದ ಕೆ. ಶಶಿಧರ ಭಟ್ ಅವರನ್ನು ಎಸ್ ಡಿ ಎಂ ಸಿ ಯ ಸರ್ವ ಸದಸ್ಯರು,ಮುಖ್ಯ ಶಿಕ್ಷಕರು ಹಾಗೂ ಅಧ್ಯಾಪಕ ವೃಂದ, ಮಕ್ಕಳು ಹಾಗೂ ಪಾಲಕರು, ವಿದ್ಯಾಭಿಮಾನಿಗಳು,ಶಾಲಾ ಹಿತೈಷಿಗಳು ಅಭಿನಂದಿಸಿದ್ದಾರೆ.







in 
