Share this news

ಕಾರ್ಕಳ : ಸಾರ್ವಜನಿಕ ವಲಯದಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಕಳ ಪುರಸಭೆ, ನಗರಾಭಿವೃದ್ಧಿ ಇಲಾಖೆ, ಸ್ವಚ್ಛ ಭಾರತ್ ಮಿಷನ್ (ನಗರ) ಇವುಗಳ ಆಶ್ರಯದಲ್ಲಿ ತ್ಯಾಜ್ಯ ಕಲಾ ಪ್ರದರ್ಶನ ನಗರದ ಶ್ರೀ ವಿಘ್ನೇಶ್ವರ ವೇಣುಗೋಪಾಲ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಡೆಯಿತು.

ಕಾರ್ಯಕ್ರಮದಲ್ಲಿ ಹಲವು ಅನುಪಯುಕ್ತ ತ್ಯಾಜ್ಯಗಳಿಂದ ತಯಾರಿಸಲಾದ ವಿವಿಧ ಕಲಾ ವಸ್ತು, ಪುರಸಭೆ ವತಿಯಿಂದ ಎರೆಹುಳುಗೊಬ್ಬರ ಸಹಿತ ಹಲವು ವಸ್ತುಗಳನ್ನು ಮಳಿಗೆ ತೆರೆದು ಸಾರ್ವಜನಿಕರಿಗೆ ಮಾರಾಟಕ್ಕೆ ಇಡಲಾಗಿತ್ತು. ಬಳಸಿ ಬಿಸಾಕಿದ ಬಾಟಲಿ, ಗೋಣಿಚೀಲ, ಪ್ಯಾನ್‌ಕ್ಯಾಪ್, ಹೆಲ್ಮೆಟ್‌ನಿಂದ ಹಾ ಗುಚ್ಚ ಕಂಪರ್ಟ್ ಬಟಲ್, ಕೊಕೊನಟ್ ಶೆಲ್, ಬಟ್ಟೆ ಮತ್ತು ಸಿಮೆಂಟು, ವಾಟರ್ ಬಾಟಲ್ ಐಸ್ ಕ್ರಿಂ ಬಾಕ್ಸ್, ಅಯಿಲ್ ಕ್ಯಾನ್, ಇತ್ಯಾದಿಗಿಂದ ವಿವಿಧ ಕಲಾಕೃತಿಯ ಕ್ರಾಫ್ಟ್ ಗಳನ್ನು ತಯಾರಿಸಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿತ್ತು. ದೀಪ, ಹೂಗುಚ್ಚ ಮಡಿಕೆ ಇತ್ಯಾದಿಗಳು ಗಮನ ಸೆಳೆದವು. ತೆಳ್ಳಾರುವಿನ ಶಾರದಾ ಎಂಬವರು ಬಟ್ಟೆಗಳಿಂದ ತಯಾರಿಸಲಾದ ಬ್ಯಾಗ್, ಇನ್ನಿತರ ವಸ್ತುಗಳು ಆಕರ್ಷಿಸಿದವು.
ಪುರಸಭೆ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ ಹಾಗೂ ಪುರಸಭೆ ಅಧಿಕಾರಿಗಳು ಸಿಬಂದಿ ಭಾಗವಹಿಸಿದ್ದರು.

                       in 

Leave a Reply

Your email address will not be published. Required fields are marked *