ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿದ್ದ ಒಂದು ಅರ್ಜಿಯ ವಿಚಾರಣೆ ನಡೆದ ಬಳಿಕ ಸದ್ಗುರು ಜಗ್ಗಿ ವಾಸುದೇವ ಇವರ ಕೊಯಂಬತ್ತೂರಿನಲ್ಲಿನ `ಇಶಾ ಫೌಂಡೇಶನ್’ ಆಶ್ರಮದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಇಬ್ಬರು ಪ್ರಜ್ಞಾವಂತ ಯುವತಿಯರು ಸಂನ್ಯಾಸ ದೀಕ್ಷೆಯನ್ನು ತೆಗೆದುಕೊಂಡರೆಂದು ಅವರ ತಂದೆಯವರು `ಹೇಬಿಯಸ್ ಕಾರ್ಪಸ್‘ ಪ್ರಕರಣ ದಾಖಲಿಸಿದ್ದರು. ಆ ಸಮಯದಲ್ಲಿ, ತಮಿಳುನಾಡಿನ ಸ್ಟಾಲಿನ್ ಸರಕಾರವು ಸುಮಾರು 150 ಪೊಲೀಸರ ಪಡೆಯನ್ನು ಆಶ್ರಮಕ್ಕೆ ಕಳುಹಿಸಿತ್ತು. ಒಬ್ಬ ಯುವತಿ ಸಂನ್ಯಾಸಾಶ್ರಮ ಸ್ವೀಕರಿಸಿದಳೆಂದು ಇಷ್ಟು ದೊಡ್ಡ ಪೊಲೀಸ್ ಪಡೆ ? ಈ ಪ್ರಕರಣದಲ್ಲಿ ಸಂಪೂರ್ಣ ಆಶ್ರಮವನ್ನು ತಪಾಸಣೆ ನಡೆಸಿದಂತೆ ಸ್ಟಾಲಿನ್ ಸರಕಾರ ಎಂದಾದರೂ ಯಾವುದಾದರೂ ಚರ್ಚ್ ಮತ್ತು ಮದರಸಾಗಳ ಮೇಲೆ ನಡೆಸಿದೆಯೇ ? ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ ಶಿಂಧೆ ಪ್ರಶ್ನಿಸಿದ್ದಾರೆ. ತಮಿಳುನಾಡಿನ `ಸ್ಟಾಲಿನ್ ಸರಕಾರ’ವು ಸನಾತನ ಧರ್ಮವಿರೋಧಿಯಾಗಿರುವುದರಿಂದಲೇ ಇಂತಹ ಕ್ರಮ ಕೈಗೊಂಡಿದೆ. ಹಿಂದೂ ಬಾಹುಳ್ಯವಿರುವ ರಾಷ್ಟ್ರದಲ್ಲಿ, ಹಿಂದೂಗಳು ಆಶ್ರಮದಲ್ಲಿ ಸಂನ್ಯಾಸವನ್ನು ತೆಗೆದುಕೊಂಡಿದ್ದಕ್ಕಾಗಿ ದಾಳಿ ನಡೆಸಲಾಗುತ್ತದೆ. ಇದು ಅತ್ಯಂತ ಖಂಡನೀಯವಾಗಿದ್ದು ಹಿಂದೂ ಜನಜಾಗೃತಿ ಸಮಿತಿ ಈ ಘಟನೆಯನ್ನು ತೀವ್ರ ಶಬ್ದಗಳಲ್ಲಿ ಖಂಡಿಸುತ್ತದೆ.
ಸದ್ಗುರು ಜಗ್ಗಿ ವಾಸುದೇವ ಮತ್ತು ಅವರ ‘ಇಶಾ ಫೌಂಡೇಶನ್’ ಸಾಮಾಜಿಕ, ರಾಷ್ಟ್ರೀಯ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಬಹುದೊಡ್ಡ ಕೊಡುಗೆಗಳನ್ನು ನೀಡುವ ಮೂಲಕ ಭಾರತದ ಹೆಸರನ್ನು ಪ್ರಪಂಚದಾದ್ಯಂತ ಪಸರಿಸುತ್ತಿದ್ದಾರೆ. ಈ ಫೌಂಡೇಶನ್ ಮೂಲಕ ಸಮಾಜ ಕಲ್ಯಾಣಕ್ಕಾಗಿ ಅನೇಕ ಉಪಕ್ರಮಗಳನ್ನು ನಡೆಸಲಾಗುತ್ತದೆ. ಇಂತಹ ಸಂಸ್ಥೆಯ ಮೇಲೆ ಅದು ಭಯೋತ್ಪಾದನೆಯ ನೆಲೆಯಾಗಿರುವಂತೆ ದಾಳಿ ನಡೆಸಲಾಗುತ್ತದೆ. ಇದು ಸಂಶಯಾಸ್ಪದವಾಗಿದ್ದು, ಇದನ್ನು ಹಿಂದೂ ಸಂಸ್ಥೆಗಳನ್ನು ಸಮಾಜದಲ್ಲಿ ಉದ್ದೇಶಪೂರ್ವಕವಾಗಿ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಸಮಿತಿಯು ಹೇಳಿದೆ.
ಇತ್ತೀಚೆಗೆ 14 ವರ್ಷದ ಬಾಲಕಿಯ ಮೇಲೆ ಸುಮಾರು ಎರಡು ವರ್ಷಗಳ ವರೆಗೆ ಬಲಾತ್ಕಾರ ಮಾಡಿದ ರಘುರಾಜಕುಮಾರ ಹೆಸರಿನ ಪಾದ್ರಿಯನ್ನು ಪೊಕ್ಸೊ ಕಾನೂನಿನಡಿಯಲ್ಲಿ ದೂರು ದಾಖಲಿಸಿದ್ದರೂ ಒಂದು ತಿಂಗಳವರೆಗೆ ತಮಿಳುನಾಡು ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಮತ್ತು ಆ ಪಾದ್ರಿ ಪರಾರಿಯಾದನು. ಒಂದೆಡೆ ಅಪ್ತಾಪ್ತ ಬಾಲಕಿಯ ಮೇಲೆ ಎರಡು ವರ್ಷಗಳ ವರೆಗೆ ಬಲಾತ್ಕಾರ ನಡೆದಿದ್ದರೂ ಪೊಲೀಸರ ಉದಾಸೀನತೆ ಮತ್ತು ಇನ್ನೊಂದೆಡೆ ಪ್ರಜ್ಞಾವಂತ ಯುವತಿಯರು ಸ್ವಯಂಪ್ರೇರಿತವಾಗಿ ಸಂನ್ಯಾಸವನ್ನು ಸ್ವೀಕರಿಸಿದರೆಂದು ಆಶ್ರಮದಲ್ಲಿ 150 ಪೊಲೀಸರ ದಾಳಿ. ಇದರಿಂದಲೇ ತಮಿಳುನಾಡು ಸರಕಾರದ ಸನಾತನ ಹಿಂದೂ ಧರ್ಮದ ದ್ವೇಷ ಮತ್ತು ಕ್ರಿಶ್ಚಿಯನ್ನರ ಓಲೈಕೆ ಸ್ಪಷ್ಟವಾಗುತ್ತದೆ. ಇದರಿಂದ `ಸಾಯರೊ ಮಲಂಕಾರಾ ಕ್ಯಾಥೊಲಿಕ ಚರ್ಚ್’ನ ಪಾದ್ರಿ ಬೆನೆಡಿಕ್ಟ್ ಅಂಟೊ ಇವರ ಮೇಲೆ ಮಹಿಳೆಯ ಬಲಾತ್ಕಾರ ಮಾಡಿರುವ ಆರೋಪವಿದೆ. ತಮಿಳುನಾಡಿನಲ್ಲಿ ಕ್ರಿಶ್ಚಿಯನ್ ಪಾದ್ರಿಯಿಂದ ಮಹಿಳೆಯರ ಲೈಂಗಿಕ ಶೋಷಣೆಯಾಗಿರುವ ಅನೇಕ ಪ್ರಕರಣಗಳು ಬಹಿರಂಗವಾಗಿವೆ; ಆದರೆ ಸರಕಾರವು ಇಂತಹ ಎಷ್ಟು ಚರ್ಚ್ ಸಂಸ್ಥೆಯ ಮೇಲೆ ದಾಳಿ ನಡೆಸಿದೆ ? ಸನಾತನ ಧರ್ಮಕ್ಕೆ ಡೆಂಗ್ಯೂ, ಮಲೇರಿಯಾಗಳಂತಹ ಉಪಮೆ ನೀಡಿ ಮುಗಿಸುವ ಮಾತನಾಡುವ ತಮಿಳುನಾಡಿನ ಸ್ಟಾಲಿನ್ ಸರಕಾರ ಮತ್ತು ದ್ರಾವಿಡ ಮುನ್ನೇತ್ರ ಕಳಘಂ (ಡಿ.ಎಮ್.ಕೆ) ಪಕ್ಷದಿಂದ ಮತ್ತಿನ್ನೇನು ನಿರೀಕ್ಷಿಸಬಹುದು ? ಇದರಿಂದ ಇಶಾ ಫೌಂಡೇಶನ್ ವಿರುದ್ಧ ಕೈಗೊಂಡಿರುವ ದುರುದ್ದೇಶಪೂರಿತ ಕ್ರಮದ ಬಗ್ಗೆ ತನಿಖೆ ನಡೆಸಬೇಕು ಎಂದು ಸಮಿತಿ ಆಗ್ರಹಿಸಿದೆ.