Share this news

ಕಾರ್ಕಳ: ಕಳೆದ 5 ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನೊಬ್ಬ ಕೊಳೆತ ಶವವಾಗಿ ಪತ್ತೆಯಾಗಿದ್ದಾರೆ.

ಸುರೇಶ (28) ಎಂಬುವರು ವಿಪರೀತ ಕುಡಿತದ ಚಟ ಹೊಂದಿದ್ದು ಕಳೆದ 1 ವರ್ಷದಿಂದ ಕಡ್ತಲ ಸಿರಿಬೈಲು ಎಂಬಲ್ಲಿ ತನ್ನ ಅಕ್ಕನ ಗಂಡನ ಮನೆಯಲ್ಲಿದ್ದರು. ಸುರೇಶ ಅವರು ಅ.25 ರಂದು ರಾತ್ರಿ ಕುಡಿದು ಮನೆಯಲ್ಲಿ ಜಗಳವಾಡಿ ಮನೆಯಿಂದ ಹೋಗಿದ್ದವರು ವಾಪಾಸು ಬಾರದೆ ನಾಪತ್ತೆಯಾಗಿದ್ದರು.

ಇಂದು ಸುರೇಶ ಅವರ ಸಹೋದರಿ ಗೀತಾ ಮತ್ತು ತಾಯಿ ಬೇಬಿ ಕಡ್ತಲದ ಸಿರಿಬೈಲ್ ಗೆ ಬಂದು ಹುಡುಕುತ್ತಿದ್ದಾಗ ಮೋರಿಯ ಕೆಳಗೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

Leave a Reply

Your email address will not be published. Required fields are marked *