Share this news

ಮೂಡುಬಿದಿರೆ : ಮೂಡುಬಿದಿರೆ ತಾಲೂಕಿನ ನೆಲ್ಲಿಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಸಂಭ್ರಮದಲ್ಲಿದ್ದು, 2025ರ ಏಪ್ರಿಲ್ ಅಥವಾ ಮೇ ಮೊದಲ ವಾರದಲ್ಲಿ ಎರಡು ದಿನಗಳ “ಶತಮಾನೋತ್ಸವ ಸಂಭ್ರಮ” ಸಮಾರಂಭವನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ಹಿನ್ನಲೆಯಲ್ಲಿ ಶಾಲೆಯ ಗತ ವರ್ಷದ ನೆನಪಿನಲ್ಲಿ ಶಾಲಾ ಶತಮಾನೋತ್ಸವ ಸಮಿತಿಯು ಸ್ಮರಣ ಸಂಚಿಕೆಯನ್ನು ಪ್ರಕಟಿಸುವ ಆಶಯವನ್ನು ಹೊಂದಿದೆ. ಇದಕ್ಕಾಗಿ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ಬರಹಗಳನ್ನು ಆಹ್ವಾನಿಸಲಾಗಿದೆ.

ಶಾಲೆಯಲ್ಲಿ ಓದಿದ ಊರ-ಪರ ಊರುಗಳಲ್ಲಿ ನೆಲೆಸಿರುವ ಈ ಶಾಲೆಯಲ್ಲಿ ಕಲಿತ ಬಾಲ್ಯದ ನೆನಪುಗಳನ್ನು, ಪ್ರಭಾವ ಬೀರಿದ ಶಿಕ್ಷಕರನ್ನು ಕುರಿತಂತೆ, ಊರಿನ ಜೀವನ ಪ್ರೀತಿಯನ್ನು ಪದಪುಂಜಗಳಲ್ಲಿ ವ್ಯಕ್ತಪಡಿಸುವುದಕ್ಕೆ ಅವಕಾವಿದೆ. ಜೊತೆಗೆ ಶಾಲೆಗೆ ಸಂಬAಧ ಪಟ್ಟಂತೆ ಸ್ಮರಣೀಯ ಭಾವಚಿತ್ರಗಳಿದ್ದಲ್ಲಿ ಶತಮಾನೋತ್ಸವ ಸ್ಮರಣಾ ಸಂಚಿಕೆ ಸಂಪಾದಕರಿಗೆ ಕಳುಹಿಸಿ ಕೊಡುವಂತೆ ಈ ಮೂಲಕ ಕೋರಲಾಗಿದೆ. 2024ರ ಡಿಸೆಂಬರ್ 31ರ ಒಳಗೆ nellikarusanthosh92@gmail.com ಅಥವಾ 9449444240 ಈ ಸಂಪರ್ಕ ಸಂಖ್ಯೆಗೆ ತಮ್ಮ ಬರಹ ಅಥವಾ ಭಾವಚಿತ್ರಗಳನ್ನು ಕಳುಹಿಸಿಕೊಡಲು ವಿನಂತಿಸಲಾಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *