ಅಜೆಕಾರು: ಕ್ರಶರ್‌ನಲ್ಲಿ ಟಿಪ್ಪರ್ ಹಿಮ್ಮುಖ ಚಲಿಸುತ್ತಿದ್ದ ವೇಳೆ ಡಿಕ್ಕಿಯಾಗಿ ಕೆಳಕ್ಕೆ ಬಿದ್ದ ಕ್ರಶರ್ ರೈಟರ್‌ನ ಕಾಲಿನ ಮೇಲೆ ಟಯರ್ ಹರಿದು ಆತ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಬ್ರಿಯ ಮಿಥುನ್ (26) ಗಾಯಗೊಂಡವರು.
ಮಿಥುನ್ ಅವರು ಅಜೆಕಾರಿನ ಮಂಜುಶ್ರೀ ಕ್ರಶರ್ ನಲ್ಲಿ ರೈಟರ್ ಕೆಲಸ ಮಾಡುತ್ತಿದ್ದು, ಡಿ.18 ರಂದು ಬೆಳಿಗ್ಗೆ ನಜರ್ ಅಹಮ್ಮದ್ ಎಂಬಾತ ಟಿಪ್ಪರಿನಲ್ಲಿ ಜಲ್ಲಿ ತುಂಬಿಸಲು ಕ್ರಶರ್ ಗೆ ಬಂದಿದ್ದು, ಆ ವೇಳೆ ಜಲ್ಲಿ ತುಂಬಿಸಲು ಟಿಪ್ಪರ್ ಹಿಂತೆಗೆಯುವ ವೇಳೆ ಎಡ ಭಾಗದಲ್ಲಿ ನಿಂತುಕೊAಡಿದ್ದ ಮಿಥುನ್ ಗೆ ತಾಗಿದ ಪರಿಣಾಮ ಅವರು ಬಿದ್ದು, ಬಿದ್ದ ವೇಳೆ ಲಾರಿಯ ಮುಂಭಾಗದ ಚಕ್ರ ಅವರ ಬಲ ಕಾಲಿನ ಮೇಲೆ ಚಲಿಸಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.