ಹೆಬ್ರಿ: ರಸ್ತೆ ಬದಿಯಲ್ಲಿ ಚರಂಡಿ ಕೆಲಸ ನಿರ್ವಹಿಸುತ್ತಿದ್ದ ಹಿಟಾಚಿ ಯಂತ್ರಕ್ಕೆ ಗೂಡ್ಸ್ ಡಿಕ್ಕಿಯಾಗಿ ಇಬ್ಬರು ಗಾಯಗೊಂಡಿರುವ ಘಟನೆ ಹೆಬಿ-ಉಡುಪಿ ಮುಖ್ಯರಸ್ತೆಯ ಶಿವಪುರದ ಪಿಲಿಬೈಲು ಎಂಬಲ್ಲಿ ಡಿ.18 ರಂದು ನಡೆದಿದೆ.
ಕಾರ್ಲ ಕನ್‌ಸ್ಕ್ರಕ್ಷನ್ ನ ಹಿಟಾಚಿಯಲ್ಲಿ ಕೆಲಸಗಾರ ರಾಜಕುಮಾರ್ ಯಾದವ್ ಎಂಬವರು ಡಿ.18 ರಂದು ಹೆಬ್ರಿ-ಉಡುಪಿ ರಸ್ತೆಯ 169-ಎರಲ್ಲಿ ಶಿವಪುರದ ಪಿಲಿಬೈಲು ಸೇತುವೆ ಸಮೀಪ ರಸ್ತೆ ಚರಂಡಿ ಕೆಲಸವನ್ನು ಮಾಡುತ್ತಿದ್ದ ವೇಳೆ ಹೆಬ್ರಿ ಕಡೆಯಿಂದ ಬಂದ ಗೂಡ್ಸ್ ವಾಹನವೊಂದು ಹಿಟಾಚಿಗೆ ಡಿಕ್ಕಿಯಾದ ರಭಸಕ್ಕೆ ಹಿಟಾಚಿ ಚರಂಡಿಗೆ ಬಿದ್ದು ಎರಡೂ ವಾಹನಗಳು ಜಖಂಗೊAಡಿವೆ.
ಈ ಅಪಘಾತದಲ್ಲಿ ಹಿಟಾಚಿ ಚಾಲಕ ಹಾಗೂ ಗೂಡ್ಸ್ ನಲ್ಲಿದ್ದ ಸಹಸವಾರ ಸಂತೋಷ್ ಎಂಬವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಾರೆ.
ಅಪಘಾತಕ್ಕೆ ಗೂಡ್ಸ್ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯೇ ಕಾರಣ ಎನ್ನಲಾಗಿದ್ದು, ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
