
ಕಾರ್ಕಳ,ಮೇ.1: ಕುಕ್ಕುಜೆ ಗ್ರಾಮದ ದೊಂಡೇರAಗಡಿ ಎಂಬಲ್ಲಿ ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಆಟಕ್ಕೆ ಬಳಸಿದ್ದ ನಗದು ಸಹಿತ ಇತರ ಪರಿಕರಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ದೊಂಡೆರಂಗಡಿಯಲ್ಲಿ ಸಂತೋಷ್ ಪೂಜಾರಿ ಎಂಬವರ ಅಂಗಡಿ ಬಳಿ ಅಶ್ವಿನ್ ಎಂಬಾತ ಸಾರ್ವಜನಿಕರನ್ನು ಉದ್ದೇಶಿಸಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ್ತಾ ಚೀಟಿಯಲ್ಲಿ ನಂಬ್ರ ಬರೆದು ಕೊಟ್ಟು ಅವರಿಂದ ಹಣವನ್ನು ಸಂಗ್ರಹಿಸುತ್ತಿದ್ದು, ಸ್ಥಳಕ್ಕೆ ಬಂದ ಅಜೆಕಾರು ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಮಹೇಶ್ ಟಿ.ಎಂ ಅವರು ಆತನನ್ನು ವಿಚಾರಿಸಿದಾಗ, ತಾನು ಜನರಿಂದ ಹಣವನ್ನು ಸಂಗ್ರಹಿಸಿ ಸಂತೋಷ ಪೂಜಾರಿ ಎಂಬವರಿಗೆ ನೀಡುತ್ತಿದ್ದು ಅವರು ತನಗೆ 100 ರೂಪಾಯಿಗೆ 20 ರೂಪಾಯಿಯಂತೆ ಕಮಿಷನ್ ನೀಡುತ್ತಿದ್ದುದಾಗಿ ತಿಳಿಸಿದ್ದಾನೆ.
ಆತನಿಂದ ರೂ 1,320 ನಗದು ಸಹಿತ ಆಟಕ್ಕೆ ಬಳಸಿದ್ದ ಇತರ ಪರಿಕರಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


.
.
.
.
.
.
.
.
.
.
.
.
.
.
.
.
.
.
.
.
