

ಶ್ರೀನಗರ, ಅ.30: ಶೋಪಿಯಾನ್ ಪೊಲೀಸರು ಉಗ್ರರ ಹಣಕಾಸು ಜಾಲ ಭೇದಿಸಿ 10 ಮಂದಿಯನ್ನು ಬಂಧಿಸಿದ್ದಾರೆ. ಡಿಜಿಟಲ್ ಪಾವತಿ ಮೂಲಕ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಹಣ ಹಾಗೂ ಸ್ಮಾರ್ಟ್ಫೋನ್ ಪೂರೈಕೆ ಮಾಡಲಾಗುತ್ತಿತ್ತು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂತಹ ಜಾಲಗಳ ವಿರುದ್ಧ ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದು, ಉಗ್ರರ ಆಸ್ತಿ ವಶಪಡಿಸಿಕೊಂಡು, ಯುಎಪಿಎ ಕಾಯ್ದೆಯಡಿ ಕ್ರಮ ಜರುಗಿಸುತ್ತಿದ್ದಾರೆ. ಓವೈಸ್ ಶಫಿ ನಾಯ್ಕೂ, ತಜಾಮುಲ್ ಅಹ್ಮದ್ ಶಾ, ಮೊಯಿಜ್ ಇಕ್ಬಾಲ್, ಇಮ್ದಾದ್ ಯೂಸುಫ್ ಗನಿ, ಸಾಕಿಬ್ ಜಹೂರ್ ವಾನಿ, ಅಮೀರ್ ಅಹ್ಮದ್ ಗನಿ, ಫಿರ್ದೌಸ್ ಥೋಕರ್, ಲಿಯಾಖತ್ ನಜೀರ್ ಲೋನ್, ಮೊಹಮ್ಮದ್ ಹನೀಫ್ ಮತ್ತು ಕಾಜು ಬಂಧಿತ ಆರೋಪಿಗಳು.
ಜೈಲಿನಲ್ಲಿರುವ ಭಯೋತ್ಪಾದಕರು ಮತ್ತು ಅವರ ಸಹಚರರ ಸಂಪರ್ಕದ ಮೂಲಕ ಈ ಜಾಲ ಕಾರ್ಯನಿರ್ವಹಿಸುತ್ತಿತ್ತು ಎನ್ನುವ ಶಂಕೆ ಪೊಲೀಸರಿಗಿದೆ. ವಿವಿಧ ಡಿಜಿಟಲ್ ಪಾವತಿ ವೇದಿಕೆಗಳ ಮೂಲಕ ನಡೆದ ಅನುಮಾನಾಸ್ಪದ ಹಣಕಾಸು ವಹಿವಾಟುಗಳ ತನಿಖೆ ನಡೆಸಿದಾಗ ಈ ಜಾಲದ ಸುಳಿವು ಸಿಕ್ಕಿದೆ. ಬಂಧಿತರು ಜೈಲಿನಲ್ಲಿರುವ ಭಯೋತ್ಪಾದಕರು ಮತ್ತು ಅವರ ಸಹಚರರೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ಆರೋಪಿಗಳು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದರು, ಬಳಿಕ ಈ ಹಣವನ್ನು ವ್ಯವಸ್ಥಿತ ಹಣಕಾಸು ಜಾಲಗಳ ಮೂಲಕ ಭಯೋತ್ಪಾದಕ ಸಂಘಟನೆಗಳಿಗೆ ವರ್ಗಾಯಿಸಲಾಗುತ್ತಿತ್ತು. ವಿಶೇಷವಾಗಿ ಲಷ್ಕರ್-ಎ-ತೊಯ್ಬಾ ಮತ್ತು ಅದರ ಅಂಗಸAಸ್ಥೆ ಎಂದು ಪೊಲೀಸರು ಗುರುತಿಸಿರುವ ದಿ ರೆಸಿಸ್ಟೆನ್ಸ್ ಫ್ರಂಟ್ ಸಂಘಟನೆಗಳ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಈ ಹಣವನ್ನು ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ, ಅವರ ಚಟುವಟಿಕೆಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲು ಬಳಸಲಾಗುತ್ತಿತ್ತು ಎನ್ನಲಾಗಿದೆ. ಉಗ್ರರ ಬಳಕೆಗೆ ಸ್ಮಾರ್ಟ್ಫೋನ್ಗಳನ್ನು ಖರೀದಿಸಿಕೊಡುವುದೂ ಇದರಲ್ಲಿ ಸೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬAಧಿಸಿದAತೆ ಶೋಪಿಯಾನ್ ಪೊಲೀಸ್ ಠಾಣೆಯಲ್ಲಿ ಕಾನೂನಿನ ಸಂಬAಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
