

ಉಡುಪಿ,ಅ.29: ಉಡುಪಿಯ ರೈಲ್ವೆ ಸ್ಟೇಷನ್ ರಸ್ತೆಯ ಇಂದ್ರಾಳಿ ಬಳಿ ಬಾಡಿಗೆ ಮನೆಯ ಮುಂಗಡ ಹಣದ ವಿವಾದಕ್ಕೆ ಸಂಬAಧಿಸಿದAತೆ ಎಂಬ್ರಾಯ್ಡರಿ ಅಂಗಡಿ ಮಾಲೀಕನ ಮೇಲೆ ಬಾಡಿಗೆದಾರನೇ ಆ್ಯಸಿಡ್ ಎರಚಿ, ತಲವಾರಿನಿಂದ ಹಲ್ಲೆಗೆ ಯತ್ನಿಸಿರುವ ಘಟನೆ ಇಂದು (ಅ.29) ಮಧ್ಯಾಹ್ನ ನಡೆದಿದೆ.
ಅಕ್ಕಸಾಲಿಗ ಹಾಗೂ ಪಾರ್ಟ್ ಟೈಮ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಸುರೇಶ್ ಆಚಾರ್ಯ (48) ದಾಳಿ ಮಾಡಿದ ವ್ಯಕ್ತಿ. ಇಂದ್ರಾಳಿ ಗುಡ್ನಾರು ನಿವಾಸಿ ನವೀನ್ ಕುಮಾರ್ (58) ಆ್ಯಸಿಡ್ ದಾಳಿಗೊಳಗಾದ ಅಂಗಡಿ ಮಾಲೀಕ. ಸುರೇಶ್ ಆಚಾರ್ಯ ನವೀನ್ ಕುಮಾರ್ ಅವರಿಗೆ ಸೇರಿದ ಮನೆಯನ್ನು ಇತ್ತೀಚೆಗೆ ಖಾಲಿ ಮಾಡಿದ್ದರು. ಮನೆ ಖಾಲಿ ಮಾಡಿದ ಬಳಿಕ ಪರಿಶೀಲಿಸಿದಾಗ ಗೋಡೆ ಹಾಗೂ ಟ್ಯಾಪ್ಗಳು ಹಾನಿಗೊಳಗಾಗಿದ್ದರಿಂದ, ನವೀನ್ ಅವರು ಸುರೇಶ್ ನೀಡಿದ್ದ 20,000 ಮುಂಗಡ ಹಣದಲ್ಲಿ ಎರಡು ತಿಂಗಳ ಬಾಡಿಗೆ ಮತ್ತು ರಿಪೇರಿ ವೆಚ್ಚವನ್ನು ಕಡಿತಗೊಳಿಸುವುದಾಗಿ ಹೇಳಿದ್ದರು. ಇದಕ್ಕೆ ಒಪ್ಪದ ಸುರೇಶ್ ಇಡೀ ಹಣವನ್ನು ವಾಪಸ್ ನೀಡುವಂತೆ ಗಲಾಟೆ ಮಾಡಿದ್ದ. ಇದೇ ವಿಚಾರವಾಗಿ ಇಂದು ಮಧ್ಯಾಹ್ನ ನವೀನ್ ಅವರ ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ತನ್ನ ಸ್ಕೂಟರ್ನಲ್ಲಿದ್ದ ಆ್ಯಸಿಡ್ ಬಾಟಲಿ ಹಾಗೂ ತಲವಾರನ್ನು ತಂದು ದಾಳಿ ನಡೆಸಿದ್ದಾನೆ.ಆ್ಯಸಿಡ್ ದಾಳಿಯಿಂದ ನವೀನ್ ಕುಮಾರ್ ಅವರ ಮುಖ, ಕೈ, ಹೊಟ್ಟೆ ಹಾಗೂ ಪಾದದ ಭಾಗಗಳಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಉಡುಪಿ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ವಿಶೇಷ ತಂಡವು ಆರೋಪಿ ಸುರೇಶ್ ಆಚಾರ್ಯನನ್ನು ಎಂಜಿಎA ಮೈದಾನದ ಬಳಿ ಬಂಧಿಸಿ,ದಾಳಿಗೆ ಬಳಸಿದ ಸ್ಕೂಟರ್ ಮತ್ತು ತಲವಾರನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.





.
.
.
.
.
.
.
.
.
.
.
.
.
.
.
.
.
.
.
.
