ಕಾರ್ಕಳ: ಇಲ್ಲಿನ ರಾಮಕ್ಷತ್ರಿಯ ಸಂಘ(ರಿ)ದ ಆಶ್ರಯದಲ್ಲಿ ಮತ್ತು ಶ್ರೀರಾಮ ಚಾರಿಟೇಬಲ್ ಟ್ರಸ್ಟ್ ನ ಸಹಕಾರದೊಂದಿಗೆ ಶ್ರೀರಾಮ ಸಭಾಭವನ ಬಂಡಿಮಠ ಕಾರ್ಕಳದಲ್ಲಿ ರಾಮಕ್ಷತ್ರಿಯ ವಟುಗಳ ಸಾಮೂಹಿಕ ಬ್ರಹ್ಮೋಪದೇಶವು ಮಂಗಳೂರಿನ ಪ್ರಸಿದ್ಧ ಬಾಲಂಭಟ್ ಮನೆತನದ ರಾಮಕ್ಷತ್ರಿಯ ಕುಲಪುರೋಹಿತ ರಾದ ವಿದ್ವಾನ್ ಡಾ/.ಸತ್ಯಕೃಷ್ಣ ಭಟ್ ರವರ ನೇತೃತ್ವದ ಪುರೋಹಿತರ ತಂಡದಿAದ ಧಾರ್ಮಿಕ ವಿಧಿವಿಧಾನಗಳಿಂದ ಶಾಸ್ತ್ರೋಕ್ತವಾಗಿ ನಡೆಯಿತು.
ರಾಮಕ್ಷತ್ರಿಯ ಸಮಾಜದ ಬಾಲಕಿ ಅಂಶಿಕ ಕಾರ್ಕಳ ಅವರ ಸಾಕ್ಸೋಪೋನ್ ವಾದನ, ವೇದಘೋಷ ಪಂಡಿತರ ವೇದಘೋಷಗಳಿಂದ ವಟುಗಳಿಗೆ ಆಶೀರ್ವಾದ ಎಲ್ಲರ ಗಮನ ಸೆಳೆಯಿತು.
ನಂತರ ನಡೆದ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷÀ ಗುರುಪ್ರಸಾದ್ ರಾವ್ ಅಜೆಕಾರ್ ವಹಿಸಿದ್ದರು.
ಧಾರ್ಮಿಕ ಉಪನ್ಯಾಸವನ್ನು ವಿದ್ವಾನ್ ಡಾ/.ಸತ್ಯಕೃಷ್ಣ ಭಟ್ ರವರು ನೀಡಿ, ರಾಮಕ್ಷತ್ರಿಯ ಸಂಘ, ಕಾರ್ಕಳ ಹಮ್ಮಿಕೊಂಡ ಈ ಕಾರ್ಯಕ್ರಮ ಸಾರ್ಥಕತೆಯನ್ನು ಪಡೆದುಕೊಂಡಿದೆ. ಬಾಲಂಭಟ್ ಮನೆತನ ಹಾಗೂ ರಾಮಕ್ರತ್ರಿಯ ಕುಲಬಾಂಧವರಿಗೆ ಸುಮಾರು 100 ವರ್ಷಗಳ ಆವಿನಾಭವ ಸಂಬAಧವಿದೆ. ಶಂಕರಾಚಾರ್ಯರು ಅಂದು ಹೇಳಿದ ಸತ್ಯವಾದ ಮಾತನ್ನು ನೆನಪಿಸಿಕೊಳ್ಳುತ್ತಾ ಬ್ರಾಹ್ಮಣ ಮತ್ತು ಕ್ಷತ್ರಿಯರು ಇಬ್ಬರೂ ಸರಿಯಾಗಿ ನಡೆದುಕೊಂಡರೆ ಇಡೀ ಜಗತ್ತು ಸರಿಯಾಗಿ ನಡೆದುಕೊಂಡು ಹೋಗಲು ಸಾಧ್ಯ ಅದಕ್ಕಾಗಿ ನಾವು, ನಮ್ಮನ್ನು ತೊಡಗಿಸಿಕೊಳ್ಳಬೇಕು ಹಾಗೂ ಕ್ಷತ್ರಿಯರು ರಾಜಕೀಯದಲ್ಲೂ ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಎಲ್ಲರೂ ವೈಯಕ್ತಿಕ ಸ್ವಾರ್ಥ ಬಿಟ್ಟು ಸಂಘ ಸಂಸ್ಥೆಯ ಜೊತೆಗೂಡಿ ನಡೆದರೆ ಗೌರವ ಹಾಗೂ ಪ್ರಭುತ್ವ ಸಾಧಿಸಲು ಸಾಧ್ಯ ಎಂದು ನುಡಿದು ಬ್ರಹ್ಮೋಪದೇಶ ಪಡೆದ ಇವರೆಲ್ಲರೂ ಸಮಾಜಕ್ಕೆ ಕೊಡುಗೆಯಾಗಲಿ ಎಂದು ಶುಭಾಶೀರ್ವಾದವನ್ನು ನೀಡಿದರು.
ಸಂಘದ ವತಿಯಿಂದ ವಿದ್ವಾನ್ ಡಾ/ಸತ್ಯಕೃಷ್ಣ ಭಟ್ ರವರನ್ನು ಶಾಲು ಹೊದಿಸಿ, ಸ್ಮರಣಿಕೆ, ಹಣ್ಣುಹಂಪಲುಗಳನ್ನು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಶ್ರೀರಾಮ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪಾರ್ಥಸಾರಥಿ, ರಾಮಕ್ಷತ್ರಿಯ ಸಂಘದ ಉಪಾಧ್ಯಕ್ಷ ಅಂಬಾಪ್ರಸಾದ್, ಕಾರ್ಯದರ್ಶಿ ಪ್ರವೀಣ್.ಕೆ ಉಪಸ್ಥಿತರಿದ್ದರು.
19 ವಟುಗಳಿಗೆ ಬ್ರಹ್ಮೋಪದೇಶ ಮಾಡಲಾಯಿತು. ಬಿ.ಮನಮೋಹನ ರಾವ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಬೆಂಗಳೂರು: ಪರಿಸರದ ಮೇಲೆ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಗಂಭೀರ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಾಟಲ್ಗಳಲ್ಲಿ ಕುಡಿಯುವ ನೀರು ಕೊಡುವಂತಿಲ್ಲ ಎಂಬ ಆದೇಶವನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಜನವರಿ 31ರಂದೇ ಈ ಸುತ್ತೋಲೆ ಹೊರಡಿಸಲಾಗಿದ್ದು, ಪರ್ಯಾಯ ವ್ಯವಸ್ಥೆ ಬಗ್ಗೆಯೂ ಸಲಹೆ ನೀಡಲಾಗಿದೆ.
ಪ್ಲಾಸ್ಟಿಕ್ ವಸ್ತುಗಳ ಅತಿಯಾದ ಬಳಕೆಯಿಂದ ಆರೋಗ್ಯ ಮತ್ತು ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ದೃಷ್ಟಿಯಿಂದ ಸಚಿವಾಲಯ ಸೇರಿದಂತೆ ರಾಜ್ಯಾದ್ಯಾಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸರ್ಕಾರಿ ಸೌಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾನಿಲಯಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುವಂತಹ ಯಾವುದೇ ಸಂಸ್ಥೆಗಳ ವತಿಯಿಂದ ಏರ್ಪಡಿಸಲ್ಪಡುವ ಸಭೆ ಸಮಾರಂಭಗಳಲ್ಲಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲ್ನ ನೀರಿನ ಬಳಕೆ/ ಸರಬರಾಜು ಮಾಡುವುದನ್ನು ನಿಷೇಧಿಸಲಾಗಿದೆ.
ಏಕ ಬಳಕೆಯ ಬಳಕೆಯ ಪ್ಲಾಸ್ಟಿಕ್ ಬಾಟಲ್ ನೀರಿನ ಬಳಕೆ ಹಾಗೂ ಸರಬರಾಜು ಮಾಡುವುದನ್ನು ನಿಷೇಧಿಸಿ 2024ರ ನವೆಂಬರ್ನಲ್ಲಿಯೂ ಸುತ್ತೋಲೆ ಹೊರಡಿಸಲಾಗಿತ್ತು. ಆದಗ್ಯೂ ಸಹ ಸಚಿವಾಲಯವೂ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಈ ನಿಯಮವನ್ನು ಪಾಲಿಸದಿರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ, ಇನ್ನು ಮುಂದೆ ಮೇಲಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಪ್ಲಾಸ್ಟಿಕ್ ಬಳಕೆಯ ಬದಲಾಗಿ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಪರಿಕರಗಳನ್ನು ಬಳಕೆ ಮಾಡುವಂತೆ ಮತ್ತೊಮ್ಮೆ ಸೂಚನೆ ನೀಡಲಾಗುತ್ತಿದೆ ಎಂದು ಸರ್ಕಾರದ ಉಪ ಕಾರ್ಯದರ್ಶಿಗಳು ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.