ಉಡುಪಿ: ನಗರದ ಶೋ ರೂಂ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಉಡುಪಿ ತಾಲೂಕು ಮೂಡುಬೆಳ್ಳೆಯ ಮಡಿಕೆಟ್ಟು ತಿರ್ಲಪಲ್ಕೆ ನಿವಾಸಿ ಜಯಪ್ರಕಾಶ್ (26) ಎಂಬ ವ್ಯಕ್ತಿಯು ಫೆಬ್ರವರಿ 27 ರಂದು ಕೆಲಸಕ್ಕೆ ಹೋದವರು ಮನೆಗೆ ಬಾರದೇ ನಾಪತ್ತೆಯಾಗಿರುತ್ತಾರೆ.
175 ಸೆ.ಮೀ ಎತ್ತರ, ಸಾದಾರಣ ಮೈಕಟ್ಟು, ಎಣ್ಣೆ ಕಪ್ಪು, ದಂಡು ಮುಖ ಹೊಂದಿದ್ದು ಹಿಂದಿ, ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾರೆ ಇವರ ಬಗ್ಗೆ ಮಾಹಿತಿ ದೊರತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ನಗರ ಪೊಲೀಸ್ ಠಾಣಾಧಿಕಾರಿ ಪ್ರಕಟಣೆ ತಿಳಿಸಿದೆ.

K