ದುಬೈ: ಐಸಿಸಿ ಚಾಂಪಿಯನ್ಸ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಬಗ್ಗು ಬಡಿದು ಬರೋಬ್ಬರಿ 12 ವರ್ಷಗಳ ಬಳಿಕ ಮತ್ತೆ ಚಾಂಪಿಯನ್ಸ್ ಟ್ರೋಫಿ ಗೆದ್ದು ವಿಶ್ವ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ
ಫೈನಲ್ ಪಂದ್ಯದಲ್ಲಿ ದುಬೈನ ಸ್ಟೇಡಿಯಂ ನಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆರಂಭಿಸಿ 251 ರನ್ ಗಳಿಸಿತ್ತು. ಸಾಧಾರಣ ಮೊತ್ತವನ್ನು ಬೆನ್ನತ್ತಿದ ಭಾರತದ ಕಪ್ತಾನ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಜೋಡಿ ಭರ್ಜರಿ ಶತಕದ ಜೊತೆಯಾಟವಾಡಿ ಉತ್ತಮ ಆರಂಭ ನೀಡಿತ್ತು. ಆದರೆ ಸ್ಪಿನ್ನರ್ ಗಳಿಗೆ ವರದಾನವಾಗಿದ್ದ ಪಿಚ್ ಭಾರತದ ಗೆಲುವನ್ನು ಕೊನೆ ಓವರ್ ತನಕವೂ ಕಷ್ಟವಾಗಿಸಿತ್ತು.
ಆರಂಭಿಕ ಬ್ಯಾಟರ್ ಶುಭಮನ್ ವಿಕೆಟ್ ಕಳೆದುಕೊಂಡ ಬಳಿಕ ಭರವಸೆಯ ಬ್ಯಾಟರ್ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದರೂ ಆಲ್ ರೌಂಡರ್ ಅಕ್ಸರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ಜತೆಯಾಟದ ಬಳಿಕ ಕೊನೆಗೂ ಭಾರತ ರವೀಂದ್ರ ಜಡೇಜಾ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಭಾರತಕ್ಕೆ ರೋಚಕ ಜಯ ತಂದು ಕೊಟ್ಟರು. ಈ ಮೂಲಕ ಭಾರತಕ್ಕೆ 12 ವರ್ಷಗಳ ಬಳಿಕ ಮತ್ತೆ ಚಾಂಪಿಯನ್ಸ್ ಟ್ರೋಫಿ ಜಯಿಸಿ ಭಾರತ ವಿಶ್ವ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ
K