ಅಜೆಕಾರು: ವಿಪರೀತ ಮದ್ಯಪಾನ ಮಾಡುವ ಚಟವಿದ್ದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಮರ್ಣೆ ಗ್ರಾಮದ ಕುರ್ಡೇಲು ಎಂಬಲ್ಲಿ ಮಾ.27 ರಂದು ನಡೆದಿದೆ.
ಮೂಲತಃ ಮಿಯ್ಯಾರಿನ ಮೇರಿ ಎಂಬವರ ಪುತ್ರ ರೊಶನ್ (36) ಬಾಲ್ಯದಿಂದಲೂ ಅಜೆಕಾರು ಕುರ್ಡೇಲುವಿನ ಹಿಲ್ಡಾ ಡಿಸೋಜ ಎಂಬವರ ಮನೆಯಲ್ಲಿ ವಾಸವಿದ್ದು, ವಿಪರೀತ ಮದ್ಯಪಾನ ಮಾಡುವ ಚಟವನ್ನೂ ಹೊಂದಿದ್ದರು.
ಮಾ.27 ಗುರುವಾರ ಮೇರಿ ಅವರಿಗೆ ಅಕ್ಕ ಹಿಲ್ಡಾ ಕರೆ ಮಾಡಿ ರೊಶನ್ಗೆ ಹುಷಾರಿಲ್ಲವೆಂದು ತಿಳಿಸಿದ್ದರು. ಕೂಡಲೇ ಮೇರಿ ಅವರು ಕುರ್ಡೇಲು ಅಕ್ಕನ ಮನೆಗೆ ಬಂದಾಗ ರೊಶನ್ ಮೃತಪಟ್ಟಿದ್ದು, ಆತನ ಕುಡಿತದ ಚಟದಿಂದಲೇ ಮೃತಪಟ್ಟಿರುವುದಾಗಿದೆ.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
K