Share this news

 

ಚಿತ್ರ, ವರದಿ: ಪ್ರಮೋದ್ ಚಂದ್ರ ಪೈ‌ ಮುನಿಯಾಲು

ಹೆಬ್ರಿ: ಜಿಮ್ನಾಸ್ಟಿಕ್ ನ ಮಾದರಿಯ ಸ್ಪರ್ಧೆಯಾದ ಹೆಡ್ ರೋಲ್ ಸ್ಪರ್ಧೆಯಲ್ಲಿ 4 ನಿಮಿಷ40 ಸೆಕೆಂಡ್ ನಲ್ಲಿ ಸತತ 65 ರೌಂಡ್ ಗಳನ್ನು ಮಾಡುವ ಮೂಲಕ ಮುನಿಯಾಲಿನ ಆಪ್ತಿ ಆಚಾರ್ಯ ಎನ್ನುವ ಪುಟ್ಟ ಬಾಲಕಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾಳೆ.

ಮುನಿಯಲಿನ ಶಿವಾನಂದ ಆಚಾರ್ಯ ಮತ್ತು ಲತಾ ಆಚಾರ್ಯ ದಂಪತಿಯ ಪುತ್ರಿಯಾಗಿರುವ ಆಪ್ತಿ ಆಚಾರ್ಯ ಹೆಬ್ರಿಯ ಎಸ್. ಆರ್ ಪಬ್ಲಿಕ್ ಸ್ಕೂಲಿನ 4ನೇ ತರಗತಿಯ ವಿದ್ಯಾರ್ಥಿಯಾಗಿದ್ದು ಕಳೆದ ಎರಡು ವರ್ಷಗಳಿಂದ ಅವಿನಾಶ್ ಪೆರ್ಡೂರು ಅವರಿಂದ ನೃತ್ಯ ಮತ್ತು ಜಿಮ್ನಾಸ್ಟಿಕ್ ತರಬೇತಿ ಪಡೆಯುತ್ತಿದ್ದಾಳೆ. ಈ ಪುಟ್ಟ ಬಾಲಕಿ ಜಿಮ್ನಾಸ್ಟಿಕ್ ಭಂಗಿಯಲ್ಲಿ ನಿರಂತರವಾಗಿ ತನ್ನ ತಲೆ ಹಾಗೂ ದೇಹವನ್ನು 65 ಸುತ್ತು ತಿರುಗಿಸಿ ಈ ಸಾಧನೆಗೈದಿರುವುದು ಮುನಿಯಾಲಿಗೆ ಹೆಮ್ಮೆಯ ವಿಚಾರ,ಮಾತ್ರವಲ್ಲದೇ ಉಡುಪಿ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಹೆಮ್ಮೆಯ ವಿಚಾರ.

 

 

Leave a Reply

Your email address will not be published. Required fields are marked *