ಕಾರ್ಕಳ: ಅಕ್ರಮವಾಗಿ ಮರಳು ಸಂಗ್ರಹಿಸಿ ಪಿಕ್‌ಅಪ್‌ಗೆ ತುಂಬಿಸುತ್ತಿದ್ದ ವ್ಯಕ್ತಿ ಪೊಲೀಸರನ್ನು ನೋಡಿ ಮರಳು ತುಂಬಿಸಿದ ಪಿಕಪ್ ಅನ್ನು ಬಿಟ್ಟು ಪರಾರಿಯಾಗಿದ್ದಾನೆ.
ಕಾರ್ಕಳ ಗ್ರಾಮಾಂತರ ಠಾಣಾ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ವಿಭಾಗದ ಪಿಎಸ್‌ಐ ರವರು ನೀಡಿದ ಸೂಚನೆಯಂತೆ ಕಾರ್ಕಳ ಗ್ರಾಮಾಂತರ ಠಾಣೆಯ ಚಂದ್ರಶೇಖರ, ಸಿ.ಹೆಚ್.ಸಿ. ಅವರು ಎಪ್ರಿಲ್ 24 ರಂದು ನಿಟ್ಟೆ ಗ್ರಾಮದ ಕೆಮ್ಮಣ್ಣು ಹಿತ್ಲು ಎಂಬಲ್ಲಿಗೆ ಹೋದಾಗ ಅಲ್ಲಿನ ಶಾಂಭವಿ ಹೊಳೆಯಿಂದ ಪಿಕಪ್ ನ ಚಾಲಕ ಮತ್ತು ಮಾಲಕ ಸೇರಿಕೊಂಡು ರೂ.1000 ಮೌಲ್ಯದ ಸುಮಾರು 20 ಬುಟ್ಟಿ ಮರಳನ್ನು ಅಕ್ರಮವಾಗಿ ಪಿಕಪ್‌ಗೆ ತುಂಬಿಸಿದ್ದು, ಪೊಲೀಸರನ್ನು ನೋಡಿದ ಕೂಡಲೇ ಮರಳು ತುಂಬಿದ್ದ ಪಿಕಪ್ ಅನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.