ಕಾರ್ಕಳ: ಕ್ರಿಯೇಟಿವ್ ಪಿ. ಯು ಕಾಲೇಜಿನಲ್ಲಿ 2024-2025ನೇ ಸಾಲಿನ ಎನ್.ಎಸ್.ಎಸ್ ಕಾರ್ಯಚಟುವಟಿಕೆಗಳ ಸಮಾರೋಪ ಸಮಾರಂಭವು ಎ. 26 ಶನಿವಾರದಂದು ನಡೆಯಿತು.
ಸಭೆಯನ್ನುದ್ದೇಶಿಸಿ ಸಂಸ್ಥಾಪಕರಲ್ಲಿ ಓರ್ವರಾದ ಡಾ. ಗಣನಾಥ ಶೆಟ್ಟಿ. ಬಿ. ಮಾತನಾಡಿ ಎನ್.ಎಸ್.ಎಸ್ ಜೀವನ ಪಾಠವನ್ನು ಕಲಿಸುತ್ತದೆ. ಈ ಅನುಭವ ಜೀವನದುದ್ದಕ್ಕೂ ಸಹಕಾರಿಯಾಗುತ್ತದೆ ಎಂದರು.
ಇನ್ನೋರ್ವ ಸಂಸ್ಥಾಪಕರಾದ ಅಶ್ವತ್.ಎಸ್.ಎಲ್. N.S.S . ನ ವಿಶೇಷ ಶಿಬಿರಗಳು ಹಾಗೂ ಇತರೆ ಸಮಾಜಮುಖಿ ಸೇವೆಗಳು ನಮ್ಮನ್ನು ಶ್ರೇಷ್ಠ ವ್ಯಕ್ತಿಗಳಾಗಿ ರೂಪಿಸಬಲ್ಲದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥಾಪಕರಲ್ಲಿ ಓರ್ವರು ಹಾಗೂ ಪ್ರಾಂಶುಪಾಲರೂ ಆದ ವಿದ್ವಾನ್ ಗಣಪತಿ ಭಟ್ ಮಾತನಾಡುತ್ತ ಸೇವಾ ಮನೋಭಾವ ಶ್ರೇಷ್ಠವಾದುದ್ದು, ಈ ವ್ಯಕ್ತಿತ್ವ ಬದುಕಿನುದ್ದಕ್ಕೂ ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ N.S.S ಚಟುವಟಿಕೆಗಳಲ್ಲಿ ಸಾಧನೆ ಗೈದ ಸ್ವಯಂ ಸೇವಕರಿಗೆ ಫಲಕ ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ಸಂಯೋಜನಾಧಿಕಾರಿ ಉಮೇಶ್, ಉಪನ್ಯಾಸಕರಾದ ರಾಘವೇಂದ್ರ ಬಿ. ರಾವ್. ಚಂದ್ರಕಾAತ ಹಾಗೂ ಬೋಧಕೇತರು ಹಾಗೂ ಓ.S.S ಸ್ವಯಂ ಸೇವಕರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಅಧ್ಯ ಪಡ್ರೆ ಕಾರ್ಯಕ್ರಮ ನಿರೂಪಿಸಿ, ಕುಮಾರಿ ಹಿತ ವಂದಿಸಿದರು.