Share this news

ಕಾರ್ಕಳ: ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನಲ್ಲಿ 2025-26ನೇ ಸಾಲಿನ ಪ್ರಥಮ ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ಐಕ್ಯೂಎಸಿ ವತಿಯಿಂದ ಕಾಲೇಜು ಪರಿಚಯ ಕಾರ್ಯಾಗಾರವು ನೆರವೇರಿತು.

ಮಣಿಪಾಲ ಅಕಾಡೆಮಿಯ ಆಡಳಿತಾಧಿಕಾರಿಯಾದ ಡಾ.ಶ್ರೀಧರ ಆರ್. ಪೈ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಎಲ್ಲ ಬಗೆಯ ಜ್ಞಾನವನ್ನು ಪಡೆದುಕೊಳ್ಳುವತ್ತ ಗಮನ ಹರಿಸಬೇಕು. ತಾವು ಆಯ್ಕೆ ಮಾಡಿದ ವಿಷಯದ ಕುರಿತಲ್ಲದೆ, ಬೇರೆ ಕೋರ್ಸಿಗೆ ಸಂಬAಧಪಟ್ಟ ವಿಷಯಗಳನ್ನೂ ಅರಿತುಕೊಳ್ಳುವಲ್ಲಿ ಪ್ರಬುದ್ಧರಾಗಬೇಕು. ಆಗ ನಿಮ್ಮನ್ನು ನೀವು ಹೆಚ್ಚು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಸಾಧ್ಯವಾಗುತ್ತದೆ. ಯುಪಿಎಸ್ ಸಿ ಯಂತಹ ಪರೀಕ್ಷೆಗಳನ್ನು ತಿಳಿದುಕೊಳ್ಳುವುದಕ್ಕಾದರೂ ಬರೆಯುವ ಪ್ರಯತ್ನದ ಕಡೆಗೆ ನಿಮ್ಮ ಗಮನವನ್ನು ಹರಿಸುತ್ತಾ, ಅದರ ಅಗತ್ಯವನ್ನು ಕಂಡುಕೊAಡು ಓದಿನತ್ತ ಗಮನ ಹರಿಸಬೇಕು. ಈ ಜಗತ್ತಿನಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ. ನೀವಿರುವ ಪರಿಸರದಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು, ಕಾಲಕ್ಕೆ ತಕ್ಕಂತೆ ಪ್ರತಿಯೊಬ್ಬರೂ ಅಪ್ ಡೇಟ್ ಆಗಬೇಕಾದ ಅಗತ್ಯವಿದೆ. ಭುವನೇಂದ್ರ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಅಂತಹ ಅವಕಾಶವಿದೆ. ಅದನ್ನು ಬಳಸಿಕೊಳ್ಳಿ ಎಂದು ಶುಭ ಹಾರೈಸಿದರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿ.ಎ.ಶಿವಾನಂದ ಪೈ ಮಾತನಾಡುತ್ತಾ, ಕಾಶೀಮಠದ ಶ್ರೀ ಭುವನೇಂದ್ರ ಸ್ವಾಮಿಗಳ ಆಶೀರ್ವಾದದೊಂದಿಗೆ ಸ್ಥಾಪಿತವಾದ ಈ ಕಾಲೇಜು, ಮುಂದಿನ ಪೀಳಿಗೆಯ ಜನರು ಶಿಕ್ಷಣ ಪಡೆಯಬೇಕೆಂಬ ಉದ್ದೇಶವನ್ನು ಹೊಂದಿತ್ತು. ವಿದ್ಯಾರ್ಥಿಗಳು ಪಿ.ಯು.ಸಿ.ಆದ ನಂತರ ಮುಂದೇನು ಎಂದಾಗ ಪದವಿಯನ್ನು ಆರಿಸಿದ್ದೀರಿ. ನಿಮ್ಮನ್ನು ನೀವೇ ಕ ಕೆಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವ ಸಮಯವಿದು. ಅದರ ಜೊತೆಗೆ ಪಠ್ಯೇತರ ಚಟುವಟಿಕೆಗಳೂ ನಿಮ್ಮನ್ನು ತೊಡಗಿಸಿಕೊಂಡು ಚುರುಕಾಗಬೇಕು. ಕಾಲೇಜಿನಿಂದ ಹೊರಹೋಗಿ ಸಮಾಜದಲ್ಲಿ ನಿಂತಾಗ, ನಾನು ಹೇಗೆ ಭಿನ್ನ ಎಂದು ಚಿಂತಿಸಿ ಹೆಜ್ಜೆಯನ್ನು ಹಾಕುವ ಮೂಲಕ ನಿಮ್ಮ ಸಾಮರ್ಥ್ಯವನ್ನು, ವ್ಯಕ್ತಿತ್ವವನ್ನು ಬೆಳೆಸಿಕೊಂಡು ಹೋಗಬೇಕು. ಇಲ್ಲಿ ಕಲಿಯುವಾಗ ಹಿಂಜರಿಕೆಯಿಲ್ಲದೆ ಕಲಿಯಿರಿ. ಎಲ್ಲರಿಗೂ ಅವರವರದೇ
ಸಾಮರ್ಥ್ಯವಿರುವುದರಿಂದ ಕಲಿಕೆಯನ್ನು ಶೃದ್ಧೆಯಿಂದ ಮುಂದುವರಿಸಿ ಎಂದರು.
ಆAಗ್ಲ ವಿಭಾಗದ ಮುಖ್ಯಸ್ಥರಾದ ಪ್ರೊ.ದತ್ತಾತ್ರೇಯ ಮಾರ್ಪಳ್ಳಿಯವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಸಹ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ನಂದಕಿಶೋರ್ ಕೆ. ಉಪಸ್ಥಿತರಿದ್ದರು. 
ಕಾರ್ಯಕ್ರಮದ ಬಳಿಕ ಬೇರೆ ಬೇರೆ ಸಂಘಗಳ ಎನ್.ಸಿ.ಸಿ ಹಾಗೂ ಎನ್.ಎಸ್.ಎಸ್ ಅಲ್ಲದೆ, ಕ್ರೀಡೆಯ ಕುರಿತ ಮಾಹಿತಿಯನ್ನು ಆಯಾ ವಿಭಾಗದ ಸಂಯೋಜಕರುಗಳು ಹೊಸ ಬ್ಯಾಚಿನ ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ ಎ ಕೋಟ್ಯಾನ್ ಸ್ವಾಗತಿಸಿದರು. ಆಂಗ್ಲ ವಿಭಾಗದ ಉಪನ್ಯಾಸಕಿ ಪದ್ಮಶ್ರೀ ಕೆ. ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಈಶ್ವರ ಭಟ್ ಪಿ.ವಂದಿಸಿದರು.

 

 

Leave a Reply

Your email address will not be published. Required fields are marked *