ಕಾರ್ಕಳ, ಆ6: ಶಿವಮೊಗ್ಗದಲ್ಲಿ ನಡೆದ ಅಂತರರಾಷ್ಟ್ರೀಯ ಕರಾಟೆ ಶರಸ್ಪರ್ಧೆಯಲ್ಲಿ ಏಳು ದೇಶಗಳ ವಿವಿಧ ಬಾಲ ಸ್ಪರ್ಧಿಗಳು ಭಾಗಿಯಾಗಿದ್ದು, ಈ ಪೈಕಿ ಕರ್ನಾಟಕದಿಂದ ಕಾರ್ಕಳ ತಾಲೂಕಿನ ಎಳ್ಳಾರೆಯ ಕು.ಶರಣ್ಯ ಕರಾಟೆಯ ಕುಮಟೆ ವಿಭಾಗದಲ್ಲಿ ತೃತೀಯ ಮತ್ತು ಕಟಾ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದು ಅಸಾಮಾನ್ಯ ಸಾಧನೆ ಮಾಡಿದ್ದಾರೆ.
ಇವರು ಎಳ್ಳಾರೆ ಮುಳ್ಕಾಡು ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಎಳ್ಳಾರೆ ಸತೀಶ್ ಪೂಜಾರಿ ಮತ್ತು ಶಶಿಕಲಾ ದಂಪತಿಯ ಪುತ್ರಿ. ವಿಜಯಲಕ್ಷ್ಮೀ ಹಾಗೂ ಸೋಮನಾಥ ಇವರಲ್ಲಿ ಕರಾಟೆ ತರಬೇತಿ ಪಡೆದಿದ್ದಾಳೆ.