ಹೆಬ್ರಿ : ಹೆಬ್ರಿ ಬೈಲುಮನೆ ಸೀತಾರಾಮ ಹನುಮ ಸಮೇತ ಶ್ರೀ ರಾಘವೇಂದ್ರ ಮಠದಲ್ಲಿ, ಶ್ರೀ ರಾಘವೇಂದ್ರ ಸ್ವಾಮಿಯ 354ನೇ ಆರಾಧನಾ ಮಹೋತ್ಸವವು ಪ್ರಧಾನ ಅರ್ಚಕ ವೇದಮೂರ್ತಿ ಎಚ್ ಗೋಪಾಲ ಆಚಾರ್ಯ ಇವರ ನೇತೃತ್ವದಲ್ಲಿ ನಡೆಯಿತು.
ಪವಮಾನ ಅಭಿಷೇಕ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಸೇವೆ, ಬ್ರಾಹ್ಮಣ ಸುಹಾಸಿನಿ ಆರಾಧನೆ, ಭಜನೆ, ಮಹಾಪೂಜೆ, ಉಪ್ಪಳ ರಮಣ ಕಲ್ಕೂರು ಇವರಿಂದ ಧಾರ್ಮಿಕ ಪ್ರವಚನ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಭಕ್ತಿ ಸಂಗೀತ , ಅಷ್ಟಾವದಾನ ಸೇವೆ, ರಂಗ ಪೂಜೆ, ರಥೋತ್ಸವವು ಶ್ರೀ ಮಠದ ವ್ಯವಸ್ಥಾಪಕ ವೆಂಕಟೇಶ ಆಚಾರ್ಯ ಇವರ ಸಹಕಾರದೊಂದಿಗೆ ನಡೆಯಿತು.