

ಮೂಡಬಿದಿರೆ: ಖಾಸಗಿ ಬಸ್ಸಿನಲ್ಲಿ ಅನ್ಯಕೋಮಿನ ವೃದ್ಧನೋರ್ವ ಯುವತಿಯೊಂದಿಗೆ ಅಸಭ್ಯ ವರ್ತನೆಯ ವಿಡಿಯೋ ಹರಿದಾಡುತ್ತಿದ್ದು ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೂಡಬಿದ್ರೆ ಹಿಂದೂ ಮಹಿಳಾ ಸಂರಕ್ಷಣಾ ವೇದಿಕೆಯಿಂದ ದೂರು ದಾಖಲಿಸಿದ್ದಾರೆ.
ಆತನ ವಿರುದ್ದ ಯಾರೂ ದೂರು ಕೊಡದ ಹಿನ್ನಲೆ ಪೊಲೀಸರು ಆತನನ್ನು ಕರೆಯಿಸಿ ವಿಚಾರಣೆ ಮಾಡಿ ಬಿಟ್ಟಿದ್ದರು. ಇದೀಗ
ಹಿಂದೂ ಮಹಿಳಾ ಸಂರಕ್ಷಣಾ ವೇದಿಕೆಯಿಂದ ಶ್ರೀಮತಿ ರಮಿತಾ, ಗೀತಾ ಹಾಗೂ ರಂಜಿತಾ ಅವರು ಮೂಡಬಿದ್ರೆ ಪೊಲೀಸ್ ನಿರೀಕ್ಷಣಾ ಅಧಿಕಾರಿ ಸಂದೇಶ್ ಪಿ ಜಿ ಅವರಿಗೆ ದೂರು ನೀಡಿದ್ದು, ಆತನ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.














