ಕಾರ್ಕಳ, ಆ26: ಮಂಗಳೂರು ಮೂಲದ ಬಡ್ಡಿ ವ್ಯಾಪಾರಿಯೊಬ್ಬನನ್ನು ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ಚಾಕುವಿನಿಂದ ಇರಿದು ಹತ್ಯೆಗೈಯ್ಯಲಾಗಿದೆ.
ಮೃತ ವ್ಯಕ್ತಿಯ ಮಂಗಳೂರಿನ ಪಡೀಲ್ ನಿವಾಸಿ ನವೀನ್ ಪೂಜಾರಿ(50) ಎಂದು ತಿಳಿದುಬಂದಿದೆ.
ಕಳೆದ ಹಲವು ವರ್ಷಗಳಿಂದ ಕಾರ್ಕಳ ಪರಿಸರದಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ನವೀನ್ ಪೂಜಾರಿ ಕಾರ್ಕಳದ ಎಸ್ ಜೆ ಆರ್ಕೇಡ್ ನ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ನವೀನ್ ಹತ್ಯೆಯಾದ ಸ್ಥಳದಲ್ಲಿ ಬೈಕ್ ಅನಾಥವಾಗಿ ಬಿದ್ದಿದ್ದು, ಸೋಮವಾರ ತಡರಾತ್ರಿ ಹತ್ಯೆ ನಡೆದಿರುವ ಸಾಧ್ಯತೆಯಿದ್ದು, ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರಬಹುದೆನ್ನುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಹರಿರಾಮ್ ಶಂಕರ್, ಎಎಸ್ಪಿ ಡಾ.ಹರ್ಷಾ ಪ್ರಿಯಂವದಾ, ವೃತ್ತ ನಿರೀಕ್ಷಕ ಮಂಜಪ್ಪ, ಗ್ರಾಮಾಂತರ ಠಾಣೆಯ ಎಸ್ಐ ಪ್ರಸನ್ನ.ಎಂ.ಎಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.