Share this news

ವಾಷಿಂಗ್ಟನ್‌: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ಸಮರದಿಂದ ಭಾರತ ಈಗಾಗಲೇ ಸಂಕಷ್ಟಕ್ಕೀಡಾಗಿದೆ. ಈಗ ಟ್ರಂಪ್‌ ಅವರ ಮತ್ತೊಂದು ಘೋಷಣೆ ಭಾರತದದ ಫಾರ್ಮಾ ಕಂಪನಿಗಳಿಗೆ ತೀವ್ರ ಸಂಕಷ್ಟ ಉಂಟು ಮಾಡಲಿದೆ. ದೇಶಕ್ಕೆ ವಿದೇಶಗಳಿಂದ ಆಮದಾಗುತ್ತಿರುವ ಔಷಧಿಗಳಿಗೇ ಶೇಕಡಾ 100 ತೆರಿಗೆ ವಿಧಿಸುವುದಾಗಿ ಟ್ರಂಪ್ ಘೋಷಣೆ ಮಾಡಿದ್ದಾರೆ. ಇದು ಆಕ್ಟೋಬರ್ 1 ರಿಂದಲೇ ಜಾರಿಗೆ ಬರಲಿದೆ. ಟ್ರಂಪ್ ಈ ತೆರಿಗೆ ಯುದ್ಧದಿಂದಾಗಿ ಅಮೆರಿಕದೊಂದಿಗಿನ ವ್ಯಾಪಾರದ ಮೇಲೆ ಹೆಚ್ಚು ಅವಲಂಬಿತವಾದ ದೇಶೀಯ ಕೈಗಾರಿಕೆಗಳಲ್ಲಿ ಒಂದಾದ ಭಾರತದ ಔಷಧ ವಲಯದ ಮೇಲೆ ಇದು ವ್ಯಾಪಕ ಪರಿಣಾಮ ಬೀರಲಿದೆ.

” ಅಕ್ಟೋಬರ್ 1, 2025 ರಿಂದ, ಯಾವುದೇ ಬ್ರ್ಯಾಂಡ್ ಅಥವಾ ಪೇಟೆಂಟ್ ಪಡೆದ ಔಷಧೀಯ ಉತ್ಪನ್ನಗಳ ಮೇಲೆ ನಾವು 100 ಪ್ರತಿಶತ ಸುಂಕವನ್ನು ವಿಧಿಸುತ್ತೇವೆ. ಆದರೆ ಯಾವುದಾದರೂ ಒಂದು ಕಂಪನಿ ಅಮೆರಿಕದಲ್ಲಿ ತನ್ನ ಔಷಧೀಯ ಉತ್ಪಾದನಾ ಘಟಕವನ್ನು ನಿರ್ಮಿಸುವ ನಿರ್ಧಾರ ಮಾಡಿದರೆ ಅದಕ್ಕೆ ಸುಂಕ ವಿನಾಯಿತಿ ನೀಡಲಾಗುತ್ತದೆ” ಎಂದು ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.

ಔಷಧಗಳ ಆಮದು ಮೇಲೆ ಶೇ. 100ರಷ್ಟು ಸುಂಕ ವಿಧಿಸಿರುವ ಡೊನಾಲ್ಡ್‌ ಟ್ರಂಪ್‌, ಕೆಲವು ವಿನಾಯಿತಿಗಳನ್ನೂ ಘೋಷಿಸಿದ್ದಾರೆ. ಅದರಲ್ಲಿ ಅತ್ಯಂತ ಪ್ರಮುಖವಾಗಿ ಒಂದು ವೇಳೆ ವಿದೇಶಿ ಕಂಪನಿಗಳು ಅಮೆರಿಕದಲ್ಲಿ ತಮ್ಮ ಔಷಧ ತಯಾರಿಕಾ ಘಟಕಗಳನ್ನು ಸ್ಥಾಪಿಸಿದರೆ, ಅವುಗಳಿಗೆ ಸುಂಕದಿಂದ ಸಂಪೂರ್ಣವಾಗಿ ವಿನಾಯತಿ ನೀಡಲಾಗುವುದು.

ಭಾರತದ ಔಷಧೀಯ ಸರಕುಗಳಿಗೆ ಅಮೆರಿಕ ಭಾರತದ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿದೆ. ಹಣಕಾಸು ವರ್ಷ 2024 ರಲ್ಲಿ, ಭಾರತ 27.9 ಶತಕೋಟಿ ಡಾಲರ್‌ ಮೌಲ್ಯದ ಔಷಧವನ್ನು ವಿದೇಶಕ್ಕೆ ರಪ್ತು ಮಾಡಿದೆ. ಇದರಲ್ಲಿ, ಶೇಕಡಾ 31 ಅಥವಾ 8.7 ಶತಕೋಟಿ ಡಾಲರ್ ಅಂದರೆ 7,72,31 ಕೋಟಿ ಮೌಲ್ಯದ ಔಷಧಿ ಕೇವಲ ಅಮೆರಿಕಕ್ಕೆ ಹೋಗಿದೆ ಎಂದು ಕೈಗಾರಿಕಾ ಸಂಸ್ಥೆಯಾದ ಫಾರ್ಮಾಸ್ಯುಟಿಕಲ್ಸ್ ಎಕ್ಸ್‌ಪೋರ್ಟ್ ಪ್ರಮೋಷನ್ ಕೌನ್ಸಿಲ್ ಆಫ್ ಇಂಡಿಯಾ ತಿಳಿಸಿದೆ. 2025 ರ ಮೊದಲಾರ್ಧದಲ್ಲಿ ಮಾತ್ರ $3.7 ಶತಕೋಟಿ (ರೂ. 32,505 ಕೋಟಿ) ಮೌಲ್ಯದ ಔಷಧ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *