

ಕಾರ್ಕಳ, ಅ.01: ಎಳ್ಳಾರೆ ಗ್ರಾಮದ ಪಾಲ್ಬೆಟ್ಟು ಮಹಮ್ಮಾಯಿ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವದ ಸಂದರ್ಭದಲ್ಲಿ ಅಜೆಕಾರು ಪೊಲೀಸ್ ಠಾಣೆಯ ಎಸ್ಐ ಮಹೇಶ್ ಟಿ.ಎಮ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಳ್ಳಾರೆ ಗ್ರಾಮದ ಮುಳ್ಕಾಡು ನಿವಾಸಿ ಕುಮುದಾ ಶೆಟ್ಟಿಯವರ ಕುತ್ತಿಗೆಯಿಂದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದ ಆರೋಪಿಯ ಜಾಡು ಹಿಡಿದ ಮಹೇಶ್ ನೇತೃತ್ವದ ಪೊಲೀಸರ ತಂಡ ಕೇವಲ 2ದಿನದಲ್ಲಿ ಪ್ರಕರಣ ಭೇದಿಸಿ ಆರೋಪಿಯನ್ನು ಬಂಧಿಸಿ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದರು.
ಇವರ ಈ ಸಾಧನೆಯನ್ನು ಗುರುತಿಸಿ ಮುಳ್ಕಾಡು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮುಳ್ಕಾಡು ಶಾಲೆಯ SDMC ಅಧ್ಯಕ್ಷ ಸತೀಶ್ ಪೂಜಾರಿ,ಸಮಾಜ ಸೇವಕ ಶಂಕರ್ ಶೆಟ್ಟಿ , ಹಿರಿಯರಾದ ವಿಶ್ವನಾಥ ನಾಯಕ್ ಕೆಂಜರ್ಜಡ್ಡು,ಉದಯ ನಾಯಕ್ ಹಾಸ್ಕಲ್’ಜಡ್ಡು, ರವಿ ಶೆಟ್ಟಿ ಮುಳ್ಕಾಡು , ಅರ್ಚಕ ಪ್ರವೀಣ್ ನಾಯ್ಕ್ ,ಪೊಲೀಸ್ ಕಾನ್ಸ್ಟೇಬಲ್ ಮೂರ್ತಿ, ಗದ್ದಿಗೆ ಮಾರಿಯಮ್ಮ ಭಜನಾ ಮಂಡಳಿಯ ಅದ್ಯಕ್ಷೆ ಮೀರಾ, ಬ್ರಹ್ಮಶ್ರೀ ಭಜನಾ ಮಂಡಳಿ ಮಾತಿಬೆಟ್ಟುವಿನ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


